211ನೇ ರ್‍ಯಾಂಕ್‌ : ಮಂಡ್ಯ ಯುವಕನ ಸಾಧನೆ

Mandya: pruthvik shankar got 211 rank in upsc

28-04-2018

ಮಂಡ್ಯ: ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಕ್ಕರೆನಾಡು ಮಂಡ್ಯದ ಯುವಕ 211ನೇ ರ್‍ಯಾಂಕ್‌ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾನೆ. ಮಂಡ್ಯದ ಪೃಥ್ವಿಕ್ ಶಂಕರ್ ಸಾಧನೆಗೈದ ಯುವಕ. ಪೃಥ್ವಿಕ್ ಶಂಕರ್ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಡೊಡ್ಡ ಯಾಚೇನಹಳ್ಳಿಯ ಗ್ರಾಮದ ಯುವಕನಾಗಿದ್ದಾನೆ. ಮದ್ದೂರಿನ ಕೆ.ಎಂ.ದೊಡ್ಡಿಯ ಜೀವವಿಮಾ ಕಚೇರಿಯಲ್ಲಿ  ಡೆವಲಪ್ಮೆಂಟ್ ಅಧಿಕಾರಿಯಾಗಿರೋ ಶಂಕರೇ ಗೌಡರ ಪುತ್ರ ಪೃಥ್ವಿಕ್ ಶಂಕರ್. ತಮ್ಮ ಎರಡನೇ ಪ್ರಯತ್ನದಲ್ಲೇ ಕಠಿಣ ಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಪೃಥ್ವಿಕ್ ಶಂಕರ್.


ಸಂಬಂಧಿತ ಟ್ಯಾಗ್ಗಳು

UPSC pruthvik shankar ಪೃಥ್ವಿಕ್ ಶಂಕರ್ ಸಾಧನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ