ಜಮೀರ್ ಆರೋಪಕ್ಕೆ ಹೆಚ್ಡಿಕೆ ತಿರುಗೇಟು

Zameer Ahmed Khan v/s H.D.kumaraswamy

28-04-2018

ಮೈಸೂರು: ಸಿದ್ದರಾಮಯ್ಯನವರಿಗೆ ನಾನು ಮತ್ತು ಅಮಿತ್ ಷಾ ಭೇಟಿ ಮಾಡಿರುವ ಕನಸು ಬಿದ್ದಿರಬೇಕು. ನಾನು ಏಕೆ ಅವರನ್ನು ಭೇಟಿ ಮಾಡಲಿ ಎಂದು ಸಿಎಂ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಮತ್ತು ಷಾ ಭೇಟಿ ಮಾಡಿರುವ ಕನಸು ಬಿದ್ದಿರಬೇಕು. ಅದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ನಾನೇಕೆ ಷಾ ಅವರನ್ನು ಭೇಟಿ ಮಾಡಲಿ? ಸಿಎಂ ಸೋಲಿನ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಇಬ್ಬರೂ ಲೂಟಿಕೋರರು. ರಾಜ್ಯದ ಮತದಾರರು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ಬಾರಿ ಬುದ್ಧಿ ಕಲಿಸಲಿದ್ದಾರೆ ಎಂದರು.

ವಿಜಯೇಂದ್ರಗೆ ವರುಣಾದಲ್ಲಿ ಟಿಕೆಟ್ ಕೈ ತಪ್ಪಿಸಿದ್ದು ಯಾರು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಿಎಂಗೆ ಬಿಜೆಪಿ ಜೊತೆ ಸಂಬಂಧವಿದೆ. ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿಸಿದ್ದು ಯಾರು ಎಂಬುದು ನನಗೆ ಗೊತ್ತಿದೆ. ವರುಣಾದಲ್ಲಿ ಸಿದ್ದರಾಮಯ್ಯ ಬಿಜೆಪಿಯವರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದರು.

ಇನ್ನು ಕಾಂಗ್ರೆಸ್‌‌ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬೋಗಸ್‌‌ ಪ್ರಣಾಳಿಕೆಯಾಗಿದೆ. ಒಂದು ಖಾಲಿ ಹುದ್ದೆ ಸೃಷ್ಟಿಮಾಡದ ಇವರು ಉದ್ಯೋಗ ಸೃಷಿ ಎಲ್ಲಿ ಮಾಡ್ತಾರೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅನ್ನ ಭಾಗ್ಯ ಎಂದು ಸಾರಿಕೊಂಡು ಬರುತ್ತಿರುವ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌‌ಗಳು ಹಾಗೇ ತೆರೆದು ಹಾಗೇ ಮರೆಯಾಗಿವೆ. ಹೋದವರಿಗೆ ಎಲ್ಲರಿಗೂ ಊಟ ಹಾಕ್ತಾರಾ? ದುಡ್ಡು ಹೊಡೆಯೋಕೆ ಇಂದಿರಾ ಕ್ಯಾಂಟೀನ್ ತೆರೆದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ನಾವೇ ಮುಂದಿನ ಮುಖ್ಯಮಂತ್ರಿ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಅವರು ಮಾಡಿಕೊಳ್ಳಲಿ. ನಾನು ಜನರಲ್ಲಿ ಮನವಿ ಮಾಡಿಕೊಳ್ಳುವೆ. ನನಗೂ ನಿಮ್ಮ ಸೇವೆಗೆ ಒಂದು ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದರು.

ಬಾದಾಮಿ ಕ್ಷೇತ್ರದಲ್ಲಿ ಸಿಎಂ ಗೆಲ್ಲಿಸಲು ಜಾತಿ ಮುಖಂಡರು ಪ್ರಚಾರಕ್ಕೆ ಇಳಿದಿದ್ದಾರೆ. ನಾನು ಬಾದಾಮಿ ಕ್ಷೇತ್ರಕ್ಕೆ ಒಂದು ದಿನ ಪ್ರವಾಸಕ್ಕೆ ಹೋಗುತ್ತೇನೆ. ಚನ್ನಪಟ್ಟಣದಲ್ಲಿ ಹಣಕೊಟ್ಟು ಮತ ಖರೀದಿ ಮಾಡುತ್ತಿದ್ದಾರೆ ಎಂಬ ಜಮೀರ್ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಜಮೀರ್‌‌ ಬಗ್ಗೆ ಮಾತನಾಡಿ ನಮ್ಮ ಟೈಂ ವೇಸ್ಟ್ ಮಾಡಿಕೊಳ್ಳಲ್ಲ. ಜಮೀರ್‌‌ ನಕಲಿ ಸಾಬ್ರು ಎಂದು ಲೇವಡಿ ಮಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ