‘ಸಂಘದ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ’ ರೈ ಟೀಕೆ28-04-2018

ದಕ್ಷಿಣ ಕನ್ನಡ: ಬಂಟ್ವಾಳದಲ್ಲಿ ಹಮ್ಮಿಕೊಂಡಿದ್ದ ‘ಸಂವಿಧಾನ ಉಳಿಸಿ’ ಸಮಾವೇಶದಲ್ಲಿ ಮಾತನಾಡಿದ ನಟ ಪ್ರಕಾಶ್ ರೈ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲ್ಲ ಎಂದು ಹೇಳಿದ್ದಾರೆ. ಧರ್ಮದ ಹೆಸರಲ್ಲಿ ಜನರನ್ನು ವಿಂಗಡಿಸಿ ಓಟು ಕೇಳಬೇಡಿ, ಪ್ರಜಾಪ್ರಭುತ್ವದಲ್ಲಿ ಜಾತಿ ಧರ್ಮದ ಹೆಸರಲ್ಲಿ ಓಟು ಕೇಳುವ ಹಾಗಿಲ್ಲ, ಹಿಂದೂ ಧರ್ಮವನ್ನು ಯಾರೂ ಗುತ್ತಿಗೆ ತೆಗೆದುಕೊಂಡಿಲ್ಲ. ಯಾವುದೇ ಧರ್ಮವಾಗಲಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು ಎಂದರು.

ಹೆಂಗಸರನ್ನು ಮರ್ಯಾದೆಯಿಂದ ನೋಡದ ಪಕ್ಷ , ಅತ್ಯಾಚಾರಿಗಳನ್ನು ಬೆಂಬಲಿಸೋ ಪಕ್ಷ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ, ಸಂಘದ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ. ಬಿಜೆಪಿ ಬೆದರುಗೊಂಬೆ ಪಕ್ಷ. ಬಿಜೆಪಿಗೆ ರಾಜ್ಯದಲ್ಲಿ ಮಾತನಾಡುವ ನಾಯಕರಿಲ್ಲ. ನಿಮ್ಮ ವಯಸ್ಸೇನು ಅಮಿತ್ ಷಾ ವಯಸ್ಸೇನು, ಅವರ ಕಾಲಿಗೆ ಯಾಕೆ ಬೀಳುತ್ತೀರ. ಅಮಿತ್ ಷಾಗೆ ಯಾವ ಅರ್ಹತೆ ಇದೆ ದೇಶ ಆಳಲು ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಗುಜರಾತ್ ನಲ್ಲಿ ಗುಜರಾತಿ ಎಂದು ಮಾತನಾಡುತ್ತಾರೆ. ಇದೀಗ ಕನ್ನಡಿಗ ಆಗಲು ಹೊರಟಿದ್ದಾರೆ. 2019ರ ಬಳಿಕ ಮೋದಿ ನಿರುದ್ಯೋಗಿಯಾಗಲಿದ್ದಾರೆ, ಬಳಿಕ ಕರ್ನಾಟಕದ ವಯಸ್ಕರ ಶಾಲೆಗೆ ಬಂದು ಕನ್ನಡ ಕಲಿಯಿರಿ ಎಂದು ವ್ಯಂಗ್ಯವಾಡಿದರು. ಪಕೋಡಾ ಮಾಡಿ ಎಂದು ಹೇಳುವ ಪ್ರಧಾನಿ ಚಾಯ್ ಮಾಡಲಿ ಎಂದು ಕುಟಿಕಿದರು. ರೆಡ್ಡಿ ಸಹೋದರರು ಬಂದರೆ ನಮ್ಮ ಬೆಟ್ಟ ಗುಡ್ಡಗಳನ್ನು ಯಾರ ಕಾಪಾಡುವುದು ಎಂದು ಗಣಿಧಣಿಗಳ ವಿರುದ್ಧವೂ ಟೀಕೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

prakash rai Narendra modi ಸಂವಿಧಾನ ಉಳಿಸಿ ಸಮಾವೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ