‘ಕಾಂಗ್ರೆಸ್ ಪಕ್ಷದಿಂದ ಲೋಕಾಯುಕ್ತ ನಾಶ’-ಹೆಚ್ಡಿಡಿ28-04-2018

ಹಾಸನ: ಚಿಕ್ಕಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತನ ಕೊಲೆಯನ್ನು ಖಂಡಿಸಿರುವ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿಯೂ 2ದಿನ ಪ್ರಚಾರಕಾರ್ಯ ಮಾಡುತ್ತೇನೆ ಎಂದು ತಿಳಿಸಿದರು.

ಮಾಯಾವತಿ ಮೇ.5 ಮತ್ತು 6ರಂದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಾರೆ. ಓವೈಸಿ ಪಕ್ಷದ ಮುಖಂಡರು ಕೂಡಾ 3-4ದಿನ ಪ್ರಚಾರ ಮಾಡುತ್ತಾರೆ.

ಲೋಕಾಯುಕ್ತ ನಾಶ ಮಾಡಿದವರೇ ಕಾಂಗ್ರೆಸ್ ಪಕ್ಷದವರು ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಮೋದಿ ಪ್ರಭಾವವಿಲ್ಲ ಎನ್ನುವುದನ್ನು ನಾನು ಹೇಳುವುದಿಲ್ಲ. ಜನರೇ ತೀರ್ಮಾನ ಮಾಡುತ್ತಾರೆ.  ರಾಜ್ಯಕ್ಕೆ ಮೋದಿ ಬಂದರೆ ನಮ್ಮ ಪಕ್ಷಕ್ಕೆ ಯಾವುದೇ ಪರಿಣಾಮ ಬೀರಲ್ಲ. ಒಂದೆರಡು ದಿನದಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಭ್ರಷ್ಟಾಚಾರದ ಪಟ್ಟಿ ಬಿಡುಗಡೆ ಮಾಡಿಕೊಳ್ಳುತ್ತಿವೆ. ನಮ್ಮ ಮೇಲೆ ಯಾವ ಭ್ರಷ್ಟಾಚಾರ ಆರೋಪ ಮಾಡುತ್ತಾರೆ ಹೇಳಿ? . ಜೆಡಿಎಸ್ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಕ್ಕೆ ಮಾತ್ರ ಸೀಮಿತ ಎನ್ನುವ ಸಿಎಂ ಬಾದಾಮಿಗೆ ಯಾಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಅಂಬರೀಶ್ ಬಗ್ಗೆ ಅಭಿಮಾನವಿದೆ. ನನ್ನನ್ನು ಇದುವರೆಗೂ ಅವರು ಭೇಟಿ ಮಾಡಿಲ್ಲ. ಜಮೀರ್ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಆ ವಿಚಾರ ಬೇಡ ಎಂದರು. ಪ್ರಜ್ವಲ್ ವಿಚಾರದ ಕುರಿತು ಯಾರು ರಿಯಾಕ್ಟ್ ಮಾಡಬಾರದು ಎಂದು ಹೇಳಿದ್ದೇನೆ. ಇನ್ನು ಡಿಕೆಶಿ ಹಾಸನ ಪ್ರಚಾರಕ್ಕೆ ಆಗಮಿಸುವ ವಿಚಾರವಾಗಿ ದೇವೇಗೌಡ ಪ್ರತಿಕ್ರಿಯೆ ಹಾಸನಕ್ಕೆ ಬರೋದಕ್ಕೆ ವೀಸಾ ತಗೋಬೇಕಾ? ಯಾರಾದರೂ ಪ್ರಚಾರಕ್ಕೆ ಬರಲಿ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda D.K.Shivakumar ಓವೈಸಿ ಲೋಕಾಯುಕ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ