ವಿದ್ಯಾರ್ಥಿ ಕೊಲೆ ಪ್ರಕರಣ ಓರ್ವ ಶಂಕಿತ ಆರೋಪಿ ಬಂಧನ

Kannada News

22-05-2017

ಮಂಡ್ಯ:- ಮೇ ೧೬ ರಂದು ನಡೆದಿದ್ದ ಕೊಲೆ ಪ್ರಕರಣದ ಹಿನ್ನೆಲೆ  ಓರ್ವ ಶಂಕಿತ ಆರೋಪಿ ವಶಕ್ಕೆ ಪಡೆದು ಕೆಆರ್ ಪೇಟೆ ಗ್ರಾಮಾಂತರ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದರು. ಮೇ ೧೬ ರಂದು ನಡೆದಿದ್ದ ಕೊಲೆಯಲ್ಲಿ ೯ ನೇ ತರಗತಿ ವಿದ್ಯಾರ್ಥಿ ಶಶಾಂಕ್ (೧೫) ಎಂಬಾತ ಕೊಲೆಯಾಗಿದ್ದ ವಿದ್ಯಾರ್ಥಿ. ಮಂಡ್ಯ ಜಿಲ್ಲೆ, ಕೆಆರ್ ಪೇಟೆಯಲ್ಲಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ತೀವ್ರಗೊಳಿಸಿ ವಿಚಾರಣೆ ನಡೆಸಿತ್ತಿರುವ ಪೊಲೀಸರು. ಬೆಟ್ಟಿಂಗ್ ದಂಧೆ ಸೇರಿದಂತೆ ವಿವಿಧ ಕೋನಗಳಿಂದ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನೂ ಕೊಲೆಯ ರಹಸ್ಯ ಬಹಿರಂಗವಾಗಿಲ್ಲ ಎಂದು ಹೇಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ