ಚುನಾವಣಾ ಕಣದಲ್ಲಿ ಒಟ್ಟು 2655 ಅಭ್ಯರ್ಥಿಗಳು

karnataka assembly election total 2655 candidates

28-04-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗಾಗಿ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 3509 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 271 ಮಂದಿ ನಾಮಪತ್ರ ತಿರಸ್ಕೃತಗೊಂಡ ಬಳಿಕ ಇದ್ದ ಒಟ್ಟು 3238 ಮಂದಿ ಅಭ್ಯರ್ಥಿಗಳ ಪೈಕಿ 583 ಮಂದಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಒಟ್ಟು 2655 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ (201) ಮತ್ತು ಬಿಎಸ್ಪಿ (18) ಸೇರಿ 219 ಕ್ಷೇತ್ರಗಳಲ್ಲಿ ಸ್ಪರ್ಥಿಸುತ್ತಿದೆ. ಪಕ್ಷೇತರರಾಗಿ 1155 ಮಂದಿ ಮತ್ತು ಇತರೆ ಪಕ್ಷದಿಂದ 800 ಮಂದಿ ಸ್ಪರ್ಧಿಸುತ್ತಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿರುವ 2655 ಮಂದಿ ಪೈಕಿ 2436 ಮಂದಿ ಪುರಷರಿದ್ದು 219 ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

election candidates ಜೆಡಿಎಸ್ ನಾಮಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ