ಮೊಳಕಾಲ್ಮೂರಲ್ಲಿ ರೆಡ್ಡಿ ವಾಸ್ತವ್ಯ: ಆಯೋಗದ ಹದ್ದಿನ ಕಣ್ಣು

election commission tightened the security near janardhan reddy residence at molakalmuru

28-04-2018

ಚಿತ್ರದುರ್ಗ: ಜನಾರ್ಧನ ರೆಡ್ಡಿ ಆಪ್ತ ಶ್ರೀರಾಮುಲು ಪರ ಮೊಳಕಾಲ್ಮೂರಲ್ಲಿ ಪ್ರಚಾರ ನಡೆಸಲು ಆಗಮಿಸಿರುವ ಜನಾರ್ಧನ ರೆಡ್ಡಿಗೆ ಚುನಾವಣಾ ಆಯೋಗ ಒಂದರ ಮೇಲೊಂದು ಶಾಕ್ ನೀಡುತ್ತಿದೆ. ಜನಾರ್ಧನರೆಡ್ಡಿ ವಾಸ್ತವ್ಯದ ಮನೆ ಮೇಲೆ ಆಯೋಗ ಕಣ್ಣಿಟ್ಟಿದೆ. ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಗ್ರಾಮ ಬಳಿಯಿರುವ ರೆಡ್ಡಿ ಮನೆ ಬಳಿ ಚೆಕ್ ಪೋಸ್ಟ್ ನಿರ್ಮಿಸಿದೆ. ಎಪ್ರಿಲ್ 26ರಿಂದಲೇ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಜನಾರ್ಧನರೆಡ್ಡಿ ಮನೆಗೆ ಬಂದು ಹೋಗುವ ಪ್ರತಿ ವಾಹನಗಳ ತಪಾಸಣೆ ನಡೆಸುತ್ತಿದೆ.

ನಿನ್ನೆಯಷ್ಟೇ ಪ್ರಕಾಶ್ ಜಾವ್ಡೇಕರ್ ರೆಡ್ಡಿ ಪ್ರಚಾರಕ್ಕೆ ಬ್ರೇಕ್ ಹಾಕಿದ್ದರು. ಈಗ ಚುನಾವಣಾ ಆಯೋಗದಿಂದಲೂ ರೆಡ್ಡಿ ಮನೆಗೆ ಕಣ್ಗಾವಲು ಇರಿಸಿದೆ. ಅಕ್ರಮ ನಡೆಯದಂತೆ ತಡೆಯಲು ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ