ಯುಪಿಎಸ್ ಸಿ: ಬೀದರ್ ಯುವಕನ ಸಾಧನೆ

upsc: rahul shinde from bidar 95th rank

28-04-2018

ಬೀದರ್: ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 95ನೇ ರ್‍ಯಾಂಕ್‌ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ ಬೀದರ್ ನ ರಾಹುಲ್ ಶಿಂಧೆ. ಜಿಲ್ಲೆಯ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ಶಂಕರ ರಾವ್ ಶಿಂಧೆ ಹಾಗೂ ವಂದನಾ ಶಿಂಧೆ ಅವರ ಪುತ್ರ ರಾಹುಲ್ ಶಿಂಧೆ.

ಬೀದರ್ ನಗರದ ಗುರುನಾನಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಮತ್ತು ಹೈದ್ರಾಬಾದ್‌ ನಲ್ಲಿ ಪಿಯುಸಿ ಮುಗಿಸಿರುವ ರಾಹುಲ್, ಮುಂಬೈಯಲ್ಲಿ ಐಐಟಿಯನ್ನೂ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದವರು.

ಐಐಟಿ ಮುಗಿಸಿದಾಕ್ಷಣ ಅರಸಿ ಬಂದ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ಕಂಪನಿಯೊಂದರ ಹುದ್ದೆಯನ್ನು ತಂದೆಯ ಸಲಹೆಯಂತೆ ಕೈಬಿಟ್ಟು ಜಿಲ್ಲಾಧಿಕಾರಿಯಾಗುವಂತಹ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು.

ಕಳೆದ ವರ್ಷ 2017ರಲ್ಲಿಯೇ  ಭಾರತೀಯ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ರ್‍ಯಾಂಕ್‌ ಗಳಿಸುವ ಮೂಲಕ ಅಧಿಕಾರಿಯಾಗುವ ಭಾಗ್ಯ ಪಡೆದಿದ್ದ ಅವರು ಡೆಹ್ರಾಡೂನ್‌ನಲ್ಲಿ ತರಬೇತಿ ಮುಗಿಸುವ ಹಂತದಲ್ಲಿದ್ದಾರೆ. ಆದರೆ ಮತ್ತೊಂದು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಇದೀಗ ಐಎಎಸ್ ಅಧಿಕಾರಿಯಾಗುವ ಪಾಲಕರ ಕನಸು ಈಡೇರಿಸುವಂಥ ರ್‍ಯಾಂಕ್‌ ಪಡೆದಿದ್ದು ಇಡೀ ಕುಟುಂಬದಲ್ಲಿ ಹರ್ಷ ಮೂಡಿಸಿದೆ.


ಸಂಬಂಧಿತ ಟ್ಯಾಗ್ಗಳು

upsc Rahul shinde ಪರೀಕ್ಷೆ ರಾಹುಲ್ ಶಿಂಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ