ಕಾಂಗ್ರೆಸ್ ಪ್ರಣಾಳಿಕೆ: ಬಿಜೆಪಿ ಟೀಕೆ

congress manifesto BJP criticised

27-04-2018

ಬೆಂಗಳೂರು: ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವುದು ಸಂಪೂರ್ಣ ಖಾಲಿ ಮ್ಯಾನಿಫೆಸ್ಟೋ. ಅಂಕಿ ಅಂಶಗಳಿಲ್ಲದ, ದಿಕ್ಕು ದೆಸೆ ಇಲ್ಲದ, ದೂರದೃಷ್ಟಿ ಇಲ್ಲದ ಪ್ರಣಾಳಿಕೆ ಇದಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆ ಬೆಂಗಳೂರಿನ ಮಲ್ಲೇಶ್ವರಂ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್, ಕಾಂಗ್ರೆಸ್ ಚುನಾವಣಾ ಘೋಷಣಾ ಪತ್ರ ಸುಳ್ಳು ಭರವಸೆಗಳ ಪತ್ರ. ಕಳೆದ ಬಾರಿ ನೀಡಿದ ಇನ್ನೂರ ನಲವತ್ತು ಭರವಸೆಗಳಲ್ಲಿ ಅರ್ಧದಷ್ಟನ್ನು ಈಡೇರಿಸಿಲ್ಲ. ಈ ಪ್ರಣಾಳಿಕೆಯಲ್ಲಿ ರಾಹುಲ್ ಛಾಪಿದೆ. ರಾಹುಲ್ ಛಾಪು ಎಂದರೆ ಖಾಲಿ ಖಾಲಿ ಹವಾ ಹವಾ ಎಂದು ಲೇವಡಿ ಮಾಡಿದರು.

ಕರ್ನಾಟಕವನ್ನು ಐವತ್ಮೂರು ವರ್ಷ ಕಾಂಗ್ರೆಸ್ ನವರು ಆಳಿದ್ದಾರೆ. ಅಷ್ಟು ದಿನ ಆಡಳಿತ ನಡೆಸಿ ಎಷ್ಟು ಸಾಧಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿ 3800ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯ ಕಾರಣ ಹಾಗೂ ಅದಕ್ಕೆ ಪರಿಹಾರಗಳ ಬಗ್ಗೆ ಹೇಳಿಲ್ಲ. ಮಾನವ ಅಭಿವೃದ್ಧಿ ಸೂಚಿ ಹಾಗೂ ಅಪರಾಧ ಪ್ರಮಾಣ ಸೂಚಿಗಳಲ್ಲಿ ರಾಜ್ಯದಲ್ಲಿ ಏನಾಗಿದೆ ಆತ್ಮಹತ್ಯೆ ಹೆಚ್ಚಾಗಿದೆ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ ಒನ್ ಆಗಿದೆ. ಕೊಲೆ ಹಾಗೂ ಸುಲಿಗೆ ಕಳ್ಳತನಗಳಲ್ಲಿ ಹೆಚ್ಚಳ ಕಂಡುಬಂದಿದೆ. ಇವೆಲ್ಲದರ ಬಗ್ಗೆ ಪ್ರಣಾಳಿಕೆಯಲ್ಲಿ ಮಾತಾಡಿಲ್ಲ. ಇದು ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ. ಇದರ ತುಂಬಾ ಸುಳ್ಳು ಭರವಸೆಗಳಿವೆ. ಒಂದೂ ಅಂಕಿ-ಅಂಶಗಳಿಲ್ಲ ಎಂದು ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

Ananth Kumar manifesto ಮಂಕುಬೂದಿ ಭರವಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ