'ಬರೀ ಮನ್‌ ಕಿ ಬಾತ್ ಅಷ್ಟೆ ಕಾಮ್ ಕಿ ಬಾತ್ ನಹೀ’27-04-2018

ಕೊಡಗು: ಕೊಡಗಿನ ಗೋಣಿಕೊಪ್ಪಲಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊಡಗಿನ ಜನ ವಿಶ್ವಾಸಕ್ಕೆ, ಸ್ನೇಹಕ್ಕೆ ಅರ್ಹರು ಎಂದರು. ಮೋದಿ ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಶೂನ್ಯ. ನಮ್ಮ ಸರ್ಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಾರೆ, ನಿಮಗೆ ತಾಕತ್ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದೆ, ಅವರ್ಯಾರೂ ಬರಲೇ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಯೆಟ್ನಾಂ ಕಾಳುಮೆಣಸು ಹಗರಣಕ್ಕೆ ಕಾರಣ ಅಮಿತ್‌ ಷಾ ಮಗ ಎಂದು ಆರೋಪಿಸಿದ ಸಿಎಂ, ಮೋದಿಯದ್ದು ಬರೀ ಮನ್‌ ಕಿ ಬಾತ್, ಕಾಮ್ ಕಿ ಬಾತ್ ನಹೀ ಎಂದು ಮನ್‌ ಕಿ ಬಾತ್ ಬಗ್ಗೆ ಲೇವಡಿ ಮಾಡಿದರು.

ರೆಡ್ಡಿ ಸಹೋದರರು ರಾಜ್ಯದ ಸಾವಿರಾರು ಕೋಟಿ ಸಂಪತ್ತನ್ನು ಲೂಟಿ ಮಾಡಿದ್ದರು, ರೆಡ್ಡಿಯನ್ನು ಸಿಬಿಐನಿಂದ ಬಚಾವ್‌ ಮಾಡಿದ್ದು ಮೋದಿ. ಸಿಬಿಐ ಮೂಲಕ ಲೂಟಿಕೋರರ ರಕ್ಷಣೆ ಮಾಡಿದ್ದಾರೆ’ ಅದಕ್ಕಾಗಿಯೇ ಎಸ್‌ಐಟಿ ಮೂಲಕ ಮರು ತನಿಖೆಗೆ ಆದೇಶಿಸಿದ್ದೇನೆ ಎಂದು ತಿಳಿಸಿದರು. ಕರ್ನಾಟಕವನ್ನು ಲೂಟಿಕೋರರಿಂದ ರಕ್ಷಿಸಿ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah mann ki baat ಅಮಿತ್‌ ಷಾ ವಿಯೆಟ್ನಾಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ