ಏಕಕಾಲದಲ್ಲಿ 10 ಕಡೆಗಳಲ್ಲಿ ಎಸಿಬಿ ದಾಳಿ

ACB raid at 10 different places of the state

27-04-2018

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧದ ಬೇಟೆಯನ್ನು ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಚಿತ್ರದುರ್ಗ, ಕೋಲಾರ, ಸೇರಿ 10 ಕಡೆಗಳಲ್ಲಿ ಇಂದು ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿ ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದ ಕಂದಾಯ ನಿರೀಕ್ಷಕ ಸಂಗಪ್ಪ ಐ ಸೂದಿ, ಚಿತ್ರದುರ್ಗ ತಾಲ್ಲೂಕ ಪಂಚಾಯತ್ ಕಾರ್ಯಾನಿರ್ವಾಹಣಾಧಿಕಾರಿ ಲಕ್ಷ್ಮೀಪತಿ.ಬಿ, ಕೋಲಾರದ ಜಿಲ್ಲಾಧಿಕಾರಿ ಕಛೇರಿಯ ಕಂದಾಯ ಇಲಾಖೆ ಶಿರಸ್ತೆದಾರ ಮುನಿವೆಂಕಟಪ್ಪ, ಮಾಗಡಿ ತಾಲ್ಲೂಕು ಸೋಲೂರಿನ ಕಮ್ಯೂನಿಟಿ ಹೆಲ್ತ್ ಸೆಂಟರ್‍ ನ ಅಧೀಕ್ಷಕ ಗಣೇಶ ಮೂರ್ತಿ ಅವರನ್ನು ಕಚೇಋಇ ಮನೆಗಳ ಮೇಲೆ ಮುಂಜಾನೆಯಿಂದಲೇ ಏಕಕಾಲದ ದಾಳಿ ನಡೆಸಲಾಗಿದೆ.

ಲಕ್ಷ್ಮೀಪತಿ ಅವರ ಹುಟ್ಟೂರು ಮನಮೈನಹಟ್ಟಿಯಲ್ಲಿರುವ ನಿವಾಸ ಮತ್ತು ಚಿತ್ರದುರ್ಗ ನಗರದಲ್ಲಿರುವ ಕಾಮನಬಾವಿ ಬಡಾವಣೆಯಲ್ಲಿರುವ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಲಕ್ಷ್ಮೀಪತಿ ಅವರ ವಿರುದ್ಧ ಅದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಮಾಡಿ ಹಲವರು ದೂರು ಸಲ್ಲಿಸಿದ್ದರು.

ಗಣೇಶ ಮೂರ್ತಿಯ ಸೋಲೂರಿನ ಕಚೇರಿ ಕುದೂರಿನಲ್ಲಿರುವ ಮನೆ ಮೇಲೆ ದಾಳಿ ನಡೆಸಿದರೆ  ಶಿರಸ್ತೆದಾರ  ಮುನಿವೆಂಕಟಪ್ಪನ ಕಚೇರಿ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ ನಾಲ್ವರು ಅಧಿಕಾರಿಗಳ ಒಟ್ಟು 10 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು ಎಲ್ಲರೂ ಆದಾಯಕ್ಕೂ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ-ಪಾಸ್ತಿ ಗಳಿಸಿರುವುದು ದಾಳಿಯಲ್ಲಿ ಕಂಡು ಬಂದಿದೆ. ಅಧಿಕಾರಿಗಳಿಂದ ವಶಪಡಿಸಿಕೊಂಡಿರುವ ಅಕ್ರಮ ಆಸ್ತಿ-ಪಾಸ್ತಿಯ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB CEO ಭ್ರಷ್ಟ ಅಧಿಕಾರಿ ಆಸ್ತಿ-ಪಾಸ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ