ದೇವನಹಳ್ಳಿ ಬಳಿ 58 ಕೆಜಿ ಚಿನ್ನಾಭರಣ ವಶ

police seized 58 k.g of gold at devanahalli

27-04-2018

ಬೆಂಗಳೂರು: ನಗರದ ಹೊರ ವಲಯದ ದೇವನಹಳ್ಳಿಯ ಚನ್ನರಾಯಪಟ್ಟಣದ ಬಳಿ ವ್ಯಾನ್‍ನಲ್ಲಿ ಕೊಂಡೊಯ್ಯುತ್ತಿದ್ದ ಸುಮಾರು 17 ಕೋಟಿ ಮೌಲ್ಯದ 58 ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣದ ಬಳೇಪುರ ಚೆಕ್‍ ಪೋಸ್ಟ್ ಬಳಿ ಬೆಳಿಗ್ಗೆ 11.30ರ ವೇಳೆ ತಪಾಸಣೆ ನಡೆಸುತ್ತಿದ್ದ ಪೊಲೀಸರು ವ್ಯಾನ್‍ವೊಂದನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಬಾಕ್ಸ್ ಗಳಲ್ಲಿ ಸೀಲ್ ಮಾಡಿ ತುಂಬಿಟ್ಟಿದ್ದ 58 ಕೆಜಿ ಚಿನ್ನಾಭರಣ ಕಂಡು ಬಂದಿದೆ.

ಕೂಡಲೇ ಚಿನ್ನಾಭರಣವಿದ್ದ ಬಾಕ್ಸ್ ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದ್ದು, ವ್ಯಾನ್‍ನಲ್ಲಿದ್ದ ಚಾಲಕ ಸೇರಿ ಮೂವರನ್ನು ವಿಚಾರಣೆಗೊಳಪಡಿಸಲಾಗಿದೆ. ಅವರಲ್ಲಿ ಓರ್ವ ಗನ್‍ಮ್ಯಾನ್ ಆಗಿದ್ದು, ಆತನ ಬಳಿ ರಿವಾಲ್ವಾರ್ ಪತ್ತೆಯಾಗಿದೆ.

ರಿವಾಲ್ವಾರ್ ಅನ್ನೂ ವಶಪಡಿಸಿಕೊಂಡು ಅದು ಪರವಾನಗಿ ಪಡೆದಿರುವುದೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ನಡೆಸಲಾಗಿದೆ. 58 ಕೆಜಿ ಚಿನ್ನದ ಬಾಕ್ಸ್ ಗಳನ್ನು ಮುಂಬೈನಿಂದ ಹೊಸೂರಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಚಿನ್ನವು ತನಿಷ್ಕ್ ಚಿನ್ನಾಭರಣ ಅಂಗಡಿಗಳಿಗೆ ಸೇರಿದ್ದು ಎಂದು ವ್ಯಾನ್‍ನಲ್ಲಿದ್ದವರು ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

revolver gold ಭೀಮಾಶಂಕರ್ ಗುಳೇದ್ ಪರವಾನಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ