ಅತ್ಯಾಚಾರ: ಆರೋಪಿಗೆ 10ವರ್ಷ ಕಠಿಣ ಜೈಲು ಶಿಕ್ಷೆ

rape case: 10 years rigorous imprisonment to accused

27-04-2018

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ನಗರದ 55 ನೇ ಸಿಸಿಹೆಚ್ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2,500 ರೂ ದಂಡ ವಿಧಿಸಿ ತೀರ್ಪು ನೀಡಿದೆ. ಶ್ರೀರಾಮಪುರದಲ್ಲಿ ಗುಜರಿ ಅಂಗಡಿ ನಡೆಸುತ್ತಿದ್ದ ಮತ್ತಿಕೆರೆಯ ಗೋಕುಲದ ಆರೋಪಿ ಶಕ್ತಿವೇಲು (36) ಪಕ್ಕ ಮನೆಯಲ್ಲಿದ್ದ 12ವರ್ಷದ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಬಾಲಕಿಯ ತಾಯಿಯು ಕಳೆದ 2017ರ ಮೇ 5ರಂದು ಕೆಲಸಕ್ಕೆ ಹೋಗಿದ್ದಾಗ ಒಂಟಿಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನು.

ಈ ಸಂಬಂಧ ಸಂತ್ರಸ್ಥ ಬಾಲಕಿಯ ತಾಯಿಯು ನೀಡಿದ ದೂರು ದಾಖಲಿಸಿ ತನಿಖೆ ಕೈಗೊಂಡ ಶ್ರೀರಾಮಪುರ ಪೊಲೀಸರು ಆರೋಪಿಯನ್ನು ಬಂಧಿಸಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ಮೇಲೆ ನಗರದ 55 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ದೋಷರೋಪಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಾದವ್ ವನಮಾಲಾ ಆನಂದರಾವ್ ಅವರು ಆರೋಪಿನ್ನು ದೋಷಿ ಎಂದು ಪರಿಗಣಿಸಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2,500 ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape court ಸಿಸಿಹೆಚ್ ನ್ಯಾಯಮೂರ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ