ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ಟಾಂಗ್!

BJP released A brochure against congress manifesto

27-04-2018

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುಣಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೆ, ಕಾಂಗ್ರೆಸ್ ಗೆ ಕಿರು ಹೊತ್ತಿಗೆ ಮೂಲಕ ಬಿಜೆಪಿ ಟಾಂಗ್ ಕೊಟ್ಟಿದೆ. "ಸುಳ್ಳುಗಳ ಸರದಾರ, ಸಿದ್ದು ಸರಕಾರ ಕಾಂಗ್ರೆಸ್ ಪ್ರಣಾಳಿಕೆಯ ಕ್ರಾಸ್ ಚೆಕ್ "ಎಂಬ ಶೀರ್ಷಿಕೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿದೆ.

1.ಇಂಧನ ಮತ್ತು ವಿದ್ಯುತ್ ಪೂರೈಕೆಯಲ್ಲಿ ಶಾಕ್ ನೀಡಿದ ಸರ್ಕಾರ.

2.ಕಣ್ಣಿಗೆ ಮಣ್ಣೆರಚಿ ಮರುಳು‌ ಮಾಡಿದ ಸರ್ಕಾರ.

3.ನೈಸ್ ವರದಿ ಧೂಳು ತಿನ್ನಲು ಇದೇ‌ ಕಾರಣ.

4.ಕಸ ಪೇರಿಸುವುದೇ ನಗರಾಭಿವೃದ್ಧಿ!

5.ಶಿಕ್ಷಣವನ್ನು ‌ಕುಲಗೆಡಿಸಿದ ಕಾಂಗ್ರೆಸ್ ಸರ್ಕಾರ

6.ಸೇವಾ ವಂಚಿತ ಆರೋಗ್ಯ ಸರ್ಕಾರ.

7.ಅವೈಜ್ಞಾನಿಕ ವಿತರಣೆಯೇ ಆಹಾರ ಭದ್ರತೆಯ ನೀತಿ.

8.ಸಂಸ್ಕೃತಿ, ಪ್ರವಾಸೋದ್ಯಮಕ್ಕೂ ಇಲ್ಲ‌ ಪ್ರೋತ್ಸಾಹ.

9.ಕಮಿಷನ್ ನಿಗದಿಯೇ ಕಾಂಗ್ರೆಸ್‌ನ ಸಮಾಜ ಕಲ್ಯಾಣ.

10.ಅಲ್ಪ ಸಂಖ್ಯಾತರ ಒಳಿತಿಗೆ ಅಲ್ಪತನ ತೋರಿದ ಕಾಂಗ್ರೆಸ್.

11.ಕಾಂಗ್ರೆಸ್ ನ ಕಿರುಕುಳ ‌ಪೊಲೀಸರ ಕಳವಳ.

12.ಬ್ಯಾಂಕ್ ಎಂಬ ಬೆಣ್ಣೆ ಸವರಿದ ಕಾಂಗ್ರೆಸ್. ಸುಳ್ಳು ಜಾಹೀರಾತುಗಳ ಸರದಾರ ಎಂಬ ಕಿರು ಹೊತ್ತಿಗೆ ಮೂಲಕ ಲೇವಡಿ ಮಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ