ಫೋನ್ ಕದ್ದಾಲಿಕೆ: ಬಿಜೆಪಿ ನಾಯಕರ ವಿರುದ್ಧ ರೆಡ್ಡಿ ಆರೋಪ

Ramalinga Reddy is serious allegation against BJP leaders

27-04-2018

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಾಯಕರ ಮೇಲೆ ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಕಳೆದ 15ದಿನಗಳಿಂದ ಇದು ನಡೆಯುತ್ತಿದೆ. ದೆಹಲಿ, ಗುಜರಾತ್, ಜೈಪುರ ತಂಡದಿಂದ ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಸ್ಟ್ರಾಟೆಜಿಗಳನ್ನ ಕದಿಯುತ್ತಿದ್ದಾರೆ, ಕನ್ನಡದಲ್ಲಿ ಮಾತನಾಡಿದ್ದನ್ನ ಹಿಂದಿ, ಇಂಗ್ಗೀಷ್ ನಲ್ಲಿ ಭಾಷಾಂತರ ಮಾಡಲಾಗುತ್ತಿದೆ, ಕಳೆದ ಆರು ತಿಂಗಳ ಹಿಂದೆಯೂ ನಾನು ಆರೋಪ ಮಾಡಿದ್ದೆ ಎಂದರು.

ಮಾಧ್ಯಮಗಳಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಹಸಿ ಸುಳ್ಳು ಜಾಹೀರಾತು ನೀಡುತ್ತಿದೆ ಎಂದು ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಯಾವುದೇ ಸಾಕ್ಷ್ಯಧಾರವಿಲ್ಲದೇ ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನ ಜಾಹೀರಾತು ನೀಡಲಿ. ಬಿಜೆಪಿ ಸರ್ಕಾರದಲ್ಲಿ ಮೂವರು ಸಿಎಂ ಆಗಿದ್ದ ಬಗ್ಗೆ ಜಾಹೀರಾತು ನೀಡಲಿ. ಸದನದ ಒಳಗಡೆ ಬ್ಲೂ ಫಿಲ್ಮ್ ನೋಡಿದ್ದ ಬಗ್ಗೆ ಜಾಹೀರಾತು ನೀಡಲಿ. ಪೆಟ್ರೋಲ್, ಡಿಸೇಲ್, ಬೆಲೆ ಏರಿಕೆ ಬಗ್ಗೆ ಜಾಹೀರಾತು ನೀಡಲಿ. ಕೇಂದ್ರ ಸರ್ಕಾರ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕಿಲ್ಲ ಎಂದು ಜಾಹೀರಾತು ನೀಡಲಿ. ಬೆಂಗಳೂರು ಗಾರ್ಬೆಜ್ ಸಿಟಿ ಮಾಡಿದ್ದು ಬಿಜೆಪಿ ಈ ಬಗ್ಗೆ ಜಾಹೀರಾತು ನೀಡಲಿ ಎಂದು ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ಕ್ರೈಂ ರೇಟ್ ಬಿಜೆಪಿ ಅವಧಿಗಿಂತಲೂ ನಮ್ಮ ಸರ್ಕಾರದಲ್ಲಿ ಕಡಿಮೆಯಾಗಿದೆ. ಮಾಧ್ಯಮಗಳನ್ನು ಬಿಜೆಪಿ ದುರಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ನಾಯಕರಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಐಟಿ ರೇಡ್ ಮಾಡಿಸಲಾಗುತ್ತಿದೆ. ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಇರುವ ಉದ್ಯಮಿಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿ ಬೆಂಬಲಿಸಿಬೇಕು ಎಂದು ಪರೋಕ್ಷವಾಗಿ ಬೆದರಿಸಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನ ಬಳಸಿಕೊಂಡು ಕಿರುಕುಳ ಕೊಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Ramalinga reddy Phone Tap ಕ್ರೈಂ ರೇಟ್ ಜಾಹೀರಾತು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ