ಸಿದ್ದರಾಮಯ್ಯ ವಿರುದ್ಧ ಬಿಎಸ್ ವೈ ವಾಗ್ದಾಳಿ27-04-2018

ಹಾಸನ: ಬಿ.ಎಸ್.ಯಡಿಯೂರಪ್ಪನವರು ಹಾಸನದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳುವ ಮುನ್ನ ಕೇವಲ ಹತ್ತು ನಿಮಿಷ್ ಅಮಿತ್ ಷಾ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಬೇರೆ ಯಾವ ವಿಚಾರಗಳನ್ನು ಚರ್ಚಿಸದೆ ಅಮಿತ್ ಷಾಗೆ ಕೇವಲ ಪ್ರಚಾರದ ಅಸೈನ್ಮೆಂಟ್ ಪ್ರತಿ ತೋರಿಸಿ, ಎಲ್ಲಿ? ಏನು?ಮಾಡುತ್ತಿದ್ದಾರೆಂಬುದನ್ನು ಹೇಳಿ ಮುನ್ನಡೆದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಒಬ್ಬ ಮೂರ್ಖ, ಭ್ರಷ್ಟ, ಹಗಲು ದರೋಡೆಕೋರ, ಲೂಟಿಕೋರ, ಈ ಮನುಷ್ಯನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ತಾಕತ್ತಿದ್ದರೆ ಚಾಮುಂಡೇಶ್ವರಿಯಲ್ಲಿ‌ ಕಣಕ್ಕಿಳಿಯಬೇಕಿತ್ತು? ಯಾಕೆ ನಿಮ್ಮ ಕ್ಷೇತ್ರ ಬಿಟ್ಟು ಬಾದಾಮಿಗೆ ಹೋಗುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಕ್ಷೇತ್ರದಲ್ಲೇ‌ ನಿಮಗೆ ವಿಶ್ವಾಸ ಇಲ್ಲ. ಚಾಮುಂಡೇಶ್ವರಿ, ಬಾದಾಮಿ ಎರಡರಲ್ಲೂ ಮನೆಗೆ ಹೋಗುತ್ತೀರಿ, ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿದ್ದರಾಮಯ್ಯ ಕಾಂಗ್ರೆಸ್ ‌ಮುಳುಗಿಸೋದು ಸ್ಪಷ್ಟ. ಅವರಿಗೆ ಅವರ ಪಕ್ಷದಲ್ಲೇ ಬೆಂಬಲ‌ ನೀಡುತ್ತಿಲ್ಲ, ಅವರೆಲ್ಲ ಹತಾಷರಾಗಿದ್ದಾರೆ ಎಂದರು.

ಜನ ಕುಂತಲ್ಲಿ, ನಿಂತಲ್ಲಿ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ‌ಅವರು ಏನೂ ಮಾಡಲಿಲ್ಲ. ಲೋಕಾಯುಕ್ತ ಮುಚ್ಚಿಸಿ ತಮಗೆ ಬೇಕಾದವರನ್ನು ರಕ್ಷಣೆ ಮಾಡುತ್ತಾ ಎಸಿಬಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಉತ್ತರ ಪ್ರದೇಶದ ಫಲಿತಾಂಶ ಇಲ್ಲೂ ರಿಪೀಟ್ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ‌ಪ್ರಚಾರಕ್ಕೆ ಬರುತ್ತಾರೆ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ