ಬಾಗೂರು ಮಂಜೇಗೌಡ ವಿರುದ್ಧ ರೇವಣ್ಣ ಕಿಡಿ

 Baguru Manje Gowda v/s H.D.Revanna

27-04-2018

ಹಾಸನ: ಬಾಗೂರು ಮಂಜೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ‌.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಏಕ ವಚನದಲ್ಲೇ ಸಿಎಂ ಆಪ್ತನ ಮೇಲೆ ಹರಿಹಾಯ್ದ ರೇವಣ್ಣ, ನಾನು ಮಂಜೇಗೌಡನ ಕುರಿತು ಹೇಳಿಲ್ಲ, ಅವನ ಬಗ್ಗೆ ನಾನ್ಯಾಕೆ ಮಾತನಾಡಲಿ, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಮಂಜೇಗೌಡ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐಗೆ ವಹಿಸಲಿ, ರಾಜ್ಯದಲ್ಲಿ ಆರ್.ಟಿ.ಒ ಇನ್ಸ್ಪೆಕ್ಟರ್ ಗಳ ಅಕ್ರಮವನ್ನು‌ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ನನ್ನ ಬಳಿ ಅಕ್ರಮ ಆಸ್ತಿ ಇದ್ದರೆ ಅವರದೇ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನನ್ನ ಮಗ ಮಚ್ಚು ಲಾಂಗು ಹಿಡಿದು ಓಡಾಡುವ ಸಂಸ್ಕೃತಿಯಲ್ಲಿ ಬೆಳೆದಿಲ್ಲ, ಪ್ರಜ್ವಲ್ ಅವರ ಮನೆ ಬಳಿಗೆ ಏಕೆ ಹೋಗುತ್ತಾನೆ? ಅದಕ್ಕೆ ಏನಾದರು ದಾಖಲೆ ಇದೆಯೇ ಎಂದು ಪ್ರಶ್ನೆಸಿದ್ದಾರೆ.

ಹೊಳೆನರಸೀಪುರದಲ್ಲಿ ಸ್ವಾತಂತ್ರ್ಯ ಇಲ್ಲ ಎಂದರೆ ಸಿಎಂಗೆ ಹೇಳಿ ಕೊಡಿಸಲಿ ಎಂದು ವ್ಯಂಗ್ಯವಾಡಿದರು. ನನಗೆ ಸೋಲುವ ಭಯ ಇಲ್ಲ, ಇವರಿಂದ ನಾನು ಸಂಸ್ಕೃತಿ ಕಲಿಯಬೇಕಿಲ್ಲ,  ನಾನು ಹಾಲಿನ‌ ವಾಹನದಲ್ಲಿ ಹಣ, ಹೆಂಡ ಸಾಗಿಸುತ್ತಿದ್ದರೆ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

H.D.Revanna Baguru Manje Gowda, ದಾಖಲೆ ಸಿಬಿಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ