ವರುಣಾ ಟಿಕೆಟ್ ಗೊಂದಲ: ನಮ್ಮಿಂದ ತಪ್ಪಾಗಿದೆ-ಬಿಎಸ್ ವೈ

ex mla prahlad poojar joined BJP

26-04-2018

ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ನಿವಾಸದಲ್ಲಿ ಮಾಜಿ ಶಾಸಕ ಪ್ರಹ್ಲಾದ್ ಪೂಜಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಯಡಿಯೂರಪ್ಪ. ಪ್ರಹ್ಲಾದ್ ಪೂಜಾರ್ಗೆ ನಮ್ಮಿಂದ ಅನ್ಯಾಯ ಆಗಿತ್ತು. ಈಗ ನಮ್ಮ ಪಕ್ಷ ಸೇರಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಮಾಧ್ಯಮಗಳು ಬಹಳ ಎಚ್ಚರಿಕೆಯಿಂದ ಪ್ರಶ್ನೆ ಕೇಳಿ ಎಂದು, ಮಾದ್ಯಮಗಳ ಮೇಲೆ ಬಿಎಸ್ ವೈ ಸಿಡುಕಿದ್ದಾರೆ. ‘ನಾನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಯಾರು ಹೇಳಿದ್ದು. ಒಂದು ದಿನ ಕೂಡಾ ಬಿಡುವಿಲ್ಲದೇ ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ಆವೇಶದಿಂದ ನುಡಿದರು. ವರುಣಾದಲ್ಲಿ ಉಂಟಾದ ಟಿಕೆಟ್ ಗೊಂದಲಗಳ ಕುರಿತು, ನಮ್ಮಿಂದ ತಪ್ಪಾಗಿದೆ ಎಂದು ಜನರಲ್ಲಿ ಕೇಳಿಕೊಳ್ಳುತ್ತೇವೆ. ವಿಜಯೇಂದ್ರ ಕೂಡಾ ಅಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಮೋದಿ ಬಂದ ನಂತರ ಕರ್ನಾಟಕ ರಾಜಕಾರಣ ಚಿತ್ರಣದ ಬದಲಾಗುತ್ತೆ ಅಂತಾ ದೇವೇಗೌಡರು ಹೇಳಿದ ವಿಚಾರಕ್ಕೆ, ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಮೋದಿ ಬಂದ ನಂತರ ಬಿಜೆಪಿಗೆ ಹೆಚ್ಚು ಸ್ಥಾನ ಬರುತ್ತದೆ, ಜೆಡಿಎಸ್ ಕೂಡಾ ಹೆಚ್ಚು ಸ್ಥಾನಗಳಿಸುತ್ತೆ. ಕಾಂಗ್ರೆಸ್ ನೆಲ ಕಚ್ಚುತ್ತದೆ ಅಂತಾ ಹೇಳಿದ್ದಾರೆ, ಇದರಲ್ಲಿ ವಿಶೇಷವೇನೂ ಇಲ್ಲ ಎಂದರು.

 

 


ಸಂಬಂಧಿತ ಟ್ಯಾಗ್ಗಳು

B.S.Yeddyurappa prahlad poojar ವಿಶೇಷ ಎಚ್ಚರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ