ತಾಯಿ-ಮಗು ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

Mother, child murder: lifetime imprisonment to accused

26-04-2018 201

ಬೆಂಗಳೂರು: ಮನೆಯಲ್ಲಿ ಚಿನ್ನಾಭರಣ ಕಳವು ಮಾಡಲು ಹೋಗಿ, ತಾಯಿ, ಮಗುವನ್ನು ಕೊಲೆ ಮಾಡಿದ್ದ ಆರೋಪಿಗೆ ಹಾಸನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ ಮರಗೂರು ಅವರು, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಬೆಸೂರು ಗ್ರಾಮದ ಬಿ.ಡಿ.ಸಂದೀಪ್ ಎಂಬಾತ 17-12-2014ರಂದು, ಅರಕಲಗೂಡು ತಾಲ್ಲೂಕಿನ ದಾರಿಕೊಂಗಳಲೆಯಲ್ಲಿ ತನ್ನ ಸಂಬಂಧಿ ಬಿ.ಆರ್.ಲೋಕೇಶ್ವರಿ (28) ಮತ್ತು ಈಕೆಯ ಪುತ್ರಿ ಒಂದೂವರೆ ವರ್ಷದ ಕೆ.ಎಸ್.ಶುಭ ಅವರನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಸರ್ಕಲ್ ಇನ್ಸ್ಪೆಕ್ಟರ್ ಶಶಿಧರ್ ತನಿಖೆ ನಡೆಸಿದ್ದರು. ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕ ಕೃಷ್ಣ ಜಿ ಪೂಜಾರಿ ವಾದಿಸಿದ್ದರು.


ಸಂಬಂಧಿತ ಟ್ಯಾಗ್ಗಳು

murder life time imprisionm ನ್ಯಾಯಾಧೀಶ ಜೀವಾವಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ