ಜೈಲಿನಿಂದಲೇ ತಂದೆ ಪರ ಪ್ರಚಾರ?

mohammed nalapad Campaign from jail to his father?

26-04-2018

ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎನ್‍ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಿಂದಲೇ ತಂದೆಯ ಪರ ಪ್ರಚಾರ ಮಾಡುತ್ತಿದ್ದಾನೆ. ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿದಿರುವ ಹ್ಯಾರಿಸ್ ಅವರ ಗೆಲುವಿಗೆ ಜೈಲಿನಿಂದಲೇ ಯೋಜನೆ ರೂಪಿಸುತ್ತಿರುವ ನಲಪಾಡ್ ಮೊಬೈಲ್‍ ಮೂಲಕ ಶಾಂತಿನಗರದ ಕಾಂಗ್ರೆಸ್‍ನ ಬಿಬಿಎಂಪಿ ಸದಸ್ಯರು ಮುಖಂಡರುಗಳು ಹಾಗೂ ಪ್ರಮುಖ ಕಾರ್ಯಕರ್ತರೊಡನೆ ಮಾತುಕತೆ ನಡೆಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರತಿದಿನ ಸುಮಾರು ಆರೇಳು ಗಂಟೆ ನಲಪಾಡ್ ಮೊಬೈಲ್ ಮೂಲಕವೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಮಾಹಿತಿ ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ನಲಪಾಡ್ ಜೈಲು ಶೀಕ್ಷೆ ಅನುಭವಿಸುತ್ತಿದ್ದಾನೆ.


ಸಂಬಂಧಿತ ಟ್ಯಾಗ್ಗಳು

N.A.Haris sahanthi nagar ನಲಪಾಡ್ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ