ಜೈಲಿಂದ ಪರಾರಿಯಾಗಿದ್ದ ಎಸ್ಕೇಪ್ ಶಂಕರ ಕೊನೆಗೂ ಅರೆಸ್ಟ್

Kannada News

20-05-2017

ಬ್ಯಾಟರಾಯನಪುರ ಹಾಗು ಆರ್ ಆರ್ ನಗರ ಪೊಲೀಸರಿಂದ ಎಸ್ಕೇಪ್ ಶಂಕರನನ್ನ ಬಂಧಿಸಲಾಗಿದೆ. ಮೈಸೂರು ರಸ್ತೆಯ ಗೋಪಾಲನ್ ಮಾಲ್ ಗೆ ಬಂದಿದ್ದಾಗ ಅರೆಸ್ಟ್ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಜೈಲಿನಿಂದ ಎಸ್ಕೇಪ್ ಆಗಿದ್ದ ಶಂಕರ 2001 ರಲ್ಲಿ ಬಿಸಿನೆಸ್ ಮೆನ್ ಒಬ್ಬರ ಮಗನನ್ನ ಕಿಡ್ನ್ಯಾಪ್ ಮಾಡಿದ್ದ ಈ ಹಿನ್ನೆಲೆ 2004 ರಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು ಆನಂತರ 2011 ರಲ್ಲಿ ಪೆರೋಲ್ ಮೇಲೆ ಹೋದ ಶಂಕರ್ ಜೈಲಿಗೆ ವಾಪಸ್ ಬಂದಿರಲಿಲ್ಲ. ಪೊಲೀಸರು ಶಂಕರನನ್ನು ಅರೆಸ್ಟ್ ಮಾಡಿ ಮತ್ತೆ ಜೈಲಿಗೆ ಕಳಿಸಲಾಗಿತ್ತು . 2013 ರಲ್ಲಿ 20 ಖೈದಿಗಳನ್ನ ಮೆಡಿಕಲ್ ಟೆಸ್ಟ್ ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದ್ದ ವೇಳೆ ಟಾಯ್ಲೆಟ್ ಗೆ ಹೋಗುವುದಾಗಿ ಹೇಳಿ ಎಸ್ಕೇಪ್ ಆಗಿದ್ದು ಅಂದಿನಿಂದ ಪೊಲೀಸರಿಗೆ ಸಿಗದೆ ವೇಷ ಬದಲಿಸಿ ತಲೆ ಮರೆಸಿಕೊಂಡಿದ್ದ ಕಳೆದ ಗುರವಾರ ಶಂಕರ ಗೋಪಾಲನ್ ಮಾಲ್ ಗೆ ಬಂದಿದ್ದ ವೇಳೆ ಕ್ರೈಂ ಸಿಬ್ಬಂದಿಯೊಬ್ಬರು ದೂರದಿಂದ ಈತನ ಫೋಟೋ ತೆಗೆದು ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದರು. ಹಿರಿಯ ಅಧಿಕಾರಿಗಳು ಫೋಟೋವನ್ನು ಜೈಲ್ ಸೂಪರಿಡೆಂಟ್ ಕೃಷ್ಣಕುಮಾರ್ ಗೆ ರವಾನಿಸಿದ್ದರು. ಸಾಮ್ಯತೆ ಇದ್ದ ಹಿನ್ನೆಲೆ ವಶಕ್ಕೆ  ಪಡೆಯುವಂತೆ ಸೂಚಿಸಿದ ಜೈಲು ಅಧಿಕಾರಿ ಕೂಡಲೇ ಅರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿಯನ್ನ ವಶಕ್ಕೆ  ಪಡೆದಾಗ ತಲೆಗೆ ಸ್ಕಾರ್ಫ್ ಕಟ್ಟಿ,  ಫ್ರೆಂಚ್ ಬಿಟ್ಟಿದ್ದ ಶಂಕರ ಎನ್ನಲಾಗಿದೆ. ಕೊನೆಗೂ ಎಸ್ಕೇಪ್ ಶಂಕರನಿಗೆ ಪೊಲೀಸರು ಮತ್ತೆ ಜೈಲು ದರ್ಶನ ಮಾಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ