ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6ಮಂದಿ ಸಾವು

6 deaths in two separate cases

26-04-2018

ಬೆಂಗಳೂರು: ಕೋಲಾರದ ಶ್ರೀನಿವಾಸಪುರ ಬಳಿ  ಕೌಟುಂಬಿಕ ಕಲಹ ಹಿನ್ನೆಲೆ ಕೃಷಿ ಹೊಂಡಕ್ಕೆ ಹಾರಿ ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡರೆ, ಕೇರಳದ ಗಡಿಭಾದಲ್ಲಿ ನೀರಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದು, ಒಟ್ಟು 6ಮಂದಿ ಮೃತಪಟ್ಟಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕು ಗೊಟ್ಟಕುಂಟೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೊಟ್ಟಗಿಂಟೆ ಗ್ರಾಮದ ತಾಯಿ ಕನಕ (26), ಅಮೃತ (6) ಹಾಗೂ ಜಯಂತಿ (3) ಮೃತ ದುರ್ದೈವಿಗಳಾಗಿದ್ದಾರೆ.

ರಾತ್ರಿ ಗಂಡ ನರಸಿಂಹ ರೆಡ್ಡಿಯೊಂದಿಗೆ ಜಗಳ ಮಾಡಿಕೊಂಡಿರುವ ಕನಕ ತನ್ನಿಬ್ಬರ ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿ ತರುವಾಯ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿನ್ನೀರಿನಲ್ಲಿ ಮುಳುಗಿ ಸಾವು: ಕಬಿನಿ ಹಿನ್ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಕೇರಳದ ಗಡಿಭಾಗ ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಗೋಳೂರು ಮಸೀದಿಯ ಬಳಿ ನಡೆದಿದೆ. ಕೇರಳದ ಕಬಿನಿ ಗಿರಿಯ ತಂದೆ ಚಾಲಕಲ್ ಬೇಬಿ (53), ಮಗ ಅಜಿತ್(24) ಹಾಗೂ ಮಗಳು ಅನಿತ(18) ಮೃತ ದುರ್ದೈವಿಗಳು. ಪುತ್ರಿ ಅನಿತಾ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಮಗಳು ಅನಿತಾಳನ್ನು ರಕ್ಷಿಸಲು ಆಕೆಯ ತಂದೆ ನದಿಯ ಬಳಿ ಹೋದರು. ನಂತರ ಅವರು ಮುಳುಗುತ್ತಿದ್ದಾಗ ತಂದೆಗೆ ಸಹಾಯ ಮಾಡಲು ಹೋದ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kerala suicide ಕಲಹ ಪೊಲೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ