‘ವರುಣಾ ಮತ್ತು ಬಾದಾಮಿಯಲ್ಲಿ ಸಿಎಂ ಪರ ಅಲೆ’

Kempaiah submitted report to siddaramaiah

26-04-2018

ಬೆಂಗಳೂರು: ರಾಜ್ಯದ  224 ವಿಧಾನಸಭಾ ಕ್ಷೇತ್ರಗಳ ಸಾಧಕ ಬಾಧಕಗಳ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಒಪ್ಪಿಸಿದ್ದಾರೆ. ಸಿಎಂ ಹುಬ್ಬಳ್ಳಿ ಪ್ರವಾಸಕ್ಕೂ ಮುಂಚೆ ಭೇಟಿಯಾದ ಕೆಂಪಯ್ಯ ಸಿಎಂ ಜೊತೆ ಸುಧೀರ್ಘ ಚರ್ಚೆ ನಡೆಸಿದರು. ವಿಶೇಷವಾಗಿ ಚಾಮುಂಡೇಶ್ವರಿ, ಬಾದಾಮಿ, ವರುಣಾ ಕ್ಷೇತ್ರದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬಲಾಬಲದ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ವರದಿ ಬಗ್ಗೆ ವಿವರಣೆ ನೀಡಿದ ಕೆಂಪಯ್ಯ, ವರುಣಾ ಹಾಗೂ ಬಾದಾಮಿಯಲ್ಲಿ ಸಿಎಂ ಪರ ಅಲೆ ಇದ್ದು, ಚಾಮುಂಡೇಶ್ವರಿಯಲ್ಲಿ ಮತ್ತಷ್ಟು ಪ್ರಚಾರದ ಅಗತ್ಯತೆಯ ಬಗ್ಗೆ ಚರ್ಚೆಯಲ್ಲಿ ಉಲ್ಲೇಖಿಸಿದ್ದಾರೆ.

ಗುಪ್ತಚರ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತಷ್ಟು ಪ್ರಚಾರದ ಕಣದಲ್ಲೇ ಉಳಿಯುವಂತೆ ಸಲಹೆ ಮಾಡಲಾಗಿದ್ದು, ಸರ್ಕಾರದ ಸಾಧನಾ ಯಾತ್ರೆ, ಜನಾರ್ಶಿರ್ವಾದ ಯಾತ್ರೆ, ರಾಹುಲ್ ರಾಜ್ಯ ಪ್ರವಾಸ ಎಲ್ಲವೂ ಜಿಲ್ಲಾ ಮಟ್ಟದಲ್ಲೇ ಆಗಿದ್ದು,  ಬೆಂಗಳೂರಿನಲ್ಲಿ ಕನಿಷ್ಠ ಮೂರು ದಿನ ಸಿಎಂರಿಂದ ಪ್ರಚಾರದ ಅಗತ್ಯತೆ ಇದೆ ಎಂದು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Kempaiah siddaramaiah ವಿಶೇಷ ಸುಧೀರ್ಘ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ