ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ!

BJP

26-04-2018

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಸದ್ದಿಲ್ಲದೆ ನಡೆಯುತ್ತಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ರಾಜ್ಯದ ಉಸ್ತುವಾರಿ ಮುರಳೀಧರ್ ರಾವ್ ನೇತೃತ್ವದಲ್ಲಿ ಸದ್ದಿಲ್ಲದೇ ರಾಜ್ಯದ ಮಠಾಧೀಶರನ್ನು ಭೇಟಿ ಮಾಡುತ್ತಿರುವ ಬಿಜೆಪಿ ನಾಯಕರು, ಈವರೆಗೂ ರಾಜ್ಯದ ಸಾವಿರ ಮಠಾಧೀಶರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕನಿಷ್ಟ 3 ಸಾವಿರ ಮಠಾಧೀಶರುನ್ನು ಭೇಟಿ ಮಾಡುವ ಉದ್ದೇಶ ಹೊಂದಿರುವ ಬಿಜೆಪಿ, ದೊಡ್ಡ ದೊಡ್ಡ ಮಠಾಧೀಶರನ್ನು ರಾಷ್ಟ್ರೀಯ ನಾಯಕರು ಭೇಟಿ ಮಾಡುತ್ತಿದ್ದಾರೆ.

ಸಣ್ಣ ಪುಟ್ಟ ಮಠಾಧೀಶರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ರಾಜ್ಯ ನಾಯಕರು, ಸನಾತನ ಧರ್ಮ ಉಳಿವಿಗೆ ಮತ್ತು ದೇಶದ ಸಂಸ್ಕೃತಿ ರಕ್ಷಣೆಗೆ ಬೆಂಬಲಿಸಿ ಎಂದು ಸಂದೇಶ ಸಾರುತ್ತಿರುವ ಬಿಜೆಪಿ ನಾಯಕರು, ದೇಶದ ಸಾಧು ಸಂತರ ಪರಂಪರೆ ಉಳಿವಿಗೆ ಬಿಜೆಪಿ ಬೆಂಬಲಿಸಬೇಕು, ಗೋ ರಕ್ಷಣೆಗೆ ಬಿಜೆಪಿ ದೃಢ ನಿಲುವು ಹೊಂದಿದೆ. ಸಂಸ್ಕೃತಿ ರಕ್ಷಣೆ ಜೊತೆಗೆ ಹಿಂದೂ ಧರ್ಮ ವಿರೋಧಿ ಸರ್ಕಾರಕ್ಕೆ ಬೆಂಬಲಿಸದಂತೆ ಮನವಿ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

Muralidhar rao bjp religious ನಾಯಕ ಸನಾತನ ಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ