'ವಿಶೇಷ ಕಾರಣಕ್ಕೆ ವಿಜಯೇಂದ್ರನಿಗೆ ಟಿಕೆಟ್ ಕೈ ತಪ್ಪಿದೆ'

Vijayendra misses tickets for

26-04-2018

ಶಿವಮೊಗ್ಗ: ರಾಹುಲ್ ಗಾಂಧಿ ಒಬ್ಬ ತಲೆ ತಿರುಕ, ರಾಹುಲ್ ಗಾಂಧಿ ಮಾತನಾಡುವ ಮುನ್ನಾ ತಾನೇನು ಅಂತ ತಿಳಿದು ಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೂಬ್ಬರ ಬಗ್ಗೆ ಮಾತನಾಡುವಾಗ ಟೇಕೆ ಟಿಪ್ಪಣಿ ಮಾಡುವಾಗ ತನ್ನ ಸುತ್ತ ಯಾರು ಇದ್ದಾರೆ ಅಂತ ನೋಡಿಕೊಳ್ಳಬೇಕು. ರಾಜ್ಯವನ್ನು ಹಾಳು ಮಾಡಿದಂತಹವರನ್ನು ಪಕ್ಕದಲ್ಲಿ ಇಟ್ಟು ಕೊಂಡಿದ್ದಾರೆ ರಾಹುಲ್ ಎಂದು ಟೀಕಿಸಿದ್ದಾರೆ. ಇಂತಹವರಿಗೆ ರಾಜ್ಯದ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ದಿನಕ್ಕೆ 5ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ, ವರುಣಾದಲ್ಲಿ ನನಗೆ ಯಾವುದೇ ಹಿನ್ನಡೆ ಇಲ್ಲ. ವಿಶೇಷ ಕಾರಣಕ್ಕೆ ವಿಜಯೇಂದ್ರನಿಗೆ ಟಿಕೆಟ್ ಕೈ ತಪ್ಪಿದೆ ಎಂದು ಸಮರ್ಥಿಸಿಕೊಂಡ ಅವರು, ವಿಜಯೇಂದ್ರ ಮೈಸೂರು ಹಾಗೂ ಚಾಮರಾಜ ನಗರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು. ಮೋದಿ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ  ಬಿಜೆಪಿ ಅಭ್ಯರ್ಥಿಗಳ ಜೊತೆ ಮಾತನಾಡುತ್ತಿದ್ದಾರೆ, ಇದರಿಂದ ಪಕ್ಷಕ್ಕೆ ಹೊಸ ಹುಮ್ಮಸ್ಸು ಬರುತ್ತದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rahul gandhi yeddyurappa ಹುಮ್ಮಸ್ಸು ತಿರುಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ