ರಾಹುಲ್ ಗಾಂಧಿಗೆ ಅನಂತಕುಮಾರ್ ಪ್ರಶ್ನೆಗಳು

central minister ananth kumar questions to Rahul gandhi

25-04-2018

ಬೆಂಗಳೂರು: ನಾಳೆಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಪಕ್ಷದ ಪತನ ಶುರುವಾಗಿದೆ ಎಂದು, ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಸಾರಥ್ಯ ಎಂದರೆ ಕಾಂಗ್ರೆಸ್ ಪಕ್ಷದ ಪತನ ಹಾಗೂ ವಿಘಟನೆ ಎಂದು ಟೀಕೆ ಮಾಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿಯವರಿಗೆ ಅನಂತ್ ಕುಮಾರ್ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ನಾಲ್ಕೂವರೆ ವರ್ಷದಲ್ಲಿ 3718 ರೈತರ ಆತ್ಮಹತ್ಯೆಗಳು ವರದಿಯಾಗಿವೆ, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಲ್ಲೆಲ್ಲಿ ಬಿಜೆಪಿ ಅಧಿಕಾರದ ರಾಜ್ಯಗಳಿವೆಯೋ ಅಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆ ಆಗಿದೆ.

ಮನಮೋಹನ್ ಸಿಂಗ್ ರವರು ಪ್ರಧಾನಿಯಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಕೃತಿ ವಿಕೋಪಗಳಾದವು, ಆಗ ಅಂದಿನ ಮನಮೋಹನ್ ಸಿಂಗ್ ಸರ್ಕಾರ 4822 ಕೋಟಿ ರೂ. ಹಣ ನೀಡಿತ್ತು. ಮೋದಿ ಸರ್ಕಾರ ಬರ ಪರಿಹಾರಕ್ಕೆ ಕೊಟ್ಟ ಹಣ 5693 ಕೋಟಿ ರೂ.ಹಣ ನೀಡಿದೆ. ಈ ಬಗ್ಗೆ ರಾಹುಲ್ ಗಾಂಧಿಯವರು ಏನು ಹೇಳುತ್ತಾರೆ? ಮೂರುವರೆ ವರ್ಷದಲ್ಲಿ ಈ ಹಣ ಹೇಗೆ ಖರ್ಚಾಗಿದೆ? ಮೋದಿ ಕೊಟ್ಟರೂ ಸಿದ್ದರಾಮಯ್ಯ ಕೊಡಲಿಲ್ಲ ಎಂದು ಜನ ಹೇಳುತ್ತಿದ್ದಾರೆ.

ರಾಹುಲ್ ಗಾಂಧಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ 3857 ಲೈಂಗಿಕ ಶೋಷಣೆ ಪ್ರಕರಣಗಳಾಗಿವೆ. 800ಕ್ಕಿಂತ ಹೆಚ್ಚು ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. 7523 ಮಹಿಳೆಯರ ಹತ್ಯೆಗಳಾಗಿವೆ. ಇದನ್ನು ಖಂಡಿಸಿ ದೆಹಲಿಯಲ್ಲಿ ಕ್ಯಾಂಡಲ್ ಲೈಟ್ ಪ್ರೊಟೆಸ್ಟ್ ಮಾಡಿದರು, ಹಾಗಾದರೆ ರಾಹುಲ್ ಗಾಂಧಿ ಇಲ್ಲಿಯೂ ಕ್ಯಾಂಡಲ್ ಲೈಟ್ ಪ್ರೊಟೆಸ್ಟ್ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ