‘ಮೋದಿ ಏನೂ ಮಾಡಿಲ್ಲ, ಭಾಷಣ ಮಾಡುತ್ತಿದ್ದಾರಷ್ಟೇ’

"Modi has done nothing, only speeches"-Mallikarjun kharge

25-04-2018

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳ 3ರಂದು ಕಲಬುರಗಿಗೆ ಆಗಮಿಸುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮೋದಿ ಈ ಹಿಂದೆಯೂ ಏನೂ ಮಾಡಿಲ್ಲ. 3ರಂದು ಕಲಬುರ್ಗಿ ಜಿಲ್ಲೆಗೆ ಆಗಮಿಸಲಿದ್ದು ಏನ್ ಹೇಳ್ತಾರೆ ನೋಡೋಣ, ಅದಕ್ಕಾಗಿ ನಾವೂ ಸಿದ್ಧರಾಗಿದ್ದೇವೆ ಎಂದರು. ಮೋದಿ ಪ್ರತಿಯೊಬ್ಬರಿಗೆ 15 ಲಕ್ಷ ಕೊಡುತ್ತೀವಿ ಅಂದಿದ್ದರೂ ಇನ್ನೂ ಈ ತನಕ ಬಂದಿಲ್ಲ, ಈಗಲಾದರೂ ಮೊದಲ ಕಂತಿನ ಹಣ ಕೊಡಿ ಎಂದು ವ್ಯಂಗ್ಯಭರಿತವಾಗಿ ಟೀಕಿಸಿದ್ದಾರೆ. 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಆದರೆ ಮೋದಿ ಏನೂ ಮಾಡಿಲ್ಲ, ಬರೀ ಭಾಯಿ ಔರ್ ಭೆಹನೋ ಅಂತ ಭಾಷಣ ಮಾಡುತ್ತಿದ್ದಾರಷ್ಟೇ ಎಂದು ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mallikarjun kharge Narendra Modi ವ್ಯಂಗ್ಯ ಕೆಲಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ