ಕೇವಲ 24ಗಂಟೆಯೊಳಗೆ ಕೊಲೆಗಾರನ ಬಂಧನ

within 24 hours police arrested murder accused

25-04-2018

ಬೆಂಗಳೂರು: ಸಿಟಿ ಮಾರುಕಟ್ಟೆಯ ಸೀಗೆಬೇಲಿ ರಸ್ತೆಯಲ್ಲಿ ಅಸ್ಸಾಂ ಮೂಲದ ಅಬ್ಬು ಎಂಬಾತನ ಕಿಬ್ಬೊಟ್ಟೆಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಕೇವಲ 24 ಗಂಟೆಯೊಳಗೆ ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಮಣಿಪುರ ಮೂಲದ ಜುಮ್ಮಾಖಾನ್ ಬಂಧಿತ ಆರೋಪಿಯಾಗಿದ್ದಾನೆ. ಕೊಲೆಯಾದ ಅಬ್ಬು ಮೂಲತಃ ಮಣಿಪುರದ ಖಲೀಂಗಂಜ್ ಜಿಲ್ಲೆಯವನಾಗಿದ್ದು ಶಿವಾಜಿನಗರದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಹುಡುಗಿ ವಿಚಾರಕ್ಕೆ ತನ್ನದೇ ಊರಿನ ಗೆಳೆಯ ಜುಮ್ಮಾಖಾನ್ ಜೊತೆ ಗಲಾಟೆ ಮಾಡಿಕೊಂಡಿದ್ದನು. ಇದೇ ವಿಚಾರವಾಗಿ ಮಾತನಾಡಲು ಮತ್ತೊಬ್ಬ ಸ್ನೇಹಿತ ಮುಮಾಯ್ ಉಳಿದುಕೊಂಡಿದ್ದ ಕೆ.ಆರ್.ಮಾರ್ಕೆಟ್ ಬಳಿಯ ಖುರೇಷಿ ಮಸೀದಿ ಹಿಂಭಾಗ ಕೊಠಡಿಗೆ ಕಳೆದ ಏ.23ರಂದು ರಾತ್ರಿ ಕರೆಯಿಸಿಕೊಂಡಿದ್ದನು.

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದ್ದು ವಿಕೋಪಕ್ಕೆ ತಿರುಗಿದಾಗ ಮುಮಾಯ್ ಎಷ್ಟು ಹೇಳಿದರೂ ಕೇಳದ ಜುಮ್ಮಾಖಾನ್ ಅಬ್ಬುಗೆ ಚಾಕು ಹಾಕಿ ಪರಾರಿಯಾಗಿದ್ದ ಗಂಭೀರವಾಗಿ ಗಾಯಗೊಂಡಿದ್ದ ಅಬ್ಬುನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

ಘಟನೆ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ರಚಿಸಿದ್ದ ಚಿಕ್ಕಪೇಟೆ ಎಸಿಪಿ ನಿರಂಜನ್ ನೇತೃತ್ವದಲ್ಲಿ ವಿಶೇಷ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದೆ ಎಂದು ರವಿ.ಡಿ.ಚೆನ್ನಣ್ಣನವರ್ ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

arrested murder ಜಗಳ ವಿಕೋಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ