ಲವ್-ಸೆಕ್ಸ್-ಧೋಕಾ: ಮೋಸ ಹೋದ ಯುವತಿ

love -sex-Dhoka

25-04-2018

ಬೆಂಗಳೂರು: ಮುಂಬೈ ಮೂಲದ ಯುವತಿಯನ್ನು ಪ್ರೀತಿಸಿ ನಂಬಿಸಿ ಸಹಜೀವನ ನಡೆಸಿ ಗರ್ಭಿಣಿಯಾದ ನಂತರ ಕೈಕೊಟ್ಟು ಪರಾರಿಯಾಗಿರುವ ಯುವಕನಿಗಾಗಿ ಕಾಡುಗೊಂಡನಹಳ್ಳಿ ಪೊಲೀಸರು ಶೋಧ ನಡೆಸಿದ್ದಾರೆ.

ಇಂಜಾಮಮ್ ಉಲ್ ಹಕ್ ಎಂಬ ಯುವಕ ಮುಂಬೈ ಮೂಲದ ಯುವತಿಗೆ ಪ್ರೀತಿಸಿ ವಂಚನೆ ಮಾಡಿದ್ದು ಆತನಿಗಾಗಿಹುಡುಕಾಟ ನಡೆಸಲಾಗಿದೆ. ಕೆ.ಜಿ.ಹಳ್ಳಿಯ ಇಂಜಾಮಮ್ ಉಲ್ ಹಕ್  ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಆತನಿ ಸ್ನೇಹಿತರಿಂದಾಗಿ ಮುಂಬೈ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಪರಿಚಯವಾಗಿತ್ತು.

ಬಳಿಕ ಒಂದು ವರ್ಷಗಳ ಕಾಲ ಸುತ್ತಾಡಿ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಒಂದು ವರ್ಷಗಳ ಕಾಲ ಆಕೆಯೊಂದಿಗೆ ಜೆಪಿ ನಗರದಲ್ಲಿ ಸಹ ಜೀವನ ನಡೆಸಿದ್ದನು. ಯುವತಿ ತಾನು ಗರ್ಭಿಣಿ ಆಗಿರುವ ವಿಷಯವನ್ನು ಇಂಜಾಮಾಮ್ ಉಲ್ ಹಕ್‍ ಗೆ ತಿಳಿಸಿದ್ದು ಯುವತಿಯನ್ನ ಕೆ.ಜಿ. ಹಳ್ಳಿಯಲ್ಲಿರುವ ತನ್ನ ಮನೆಗೆ ಕರಿಸಿ ಆರೋಪಿ ಇಂಜಾಮಾಮ್ ಕುಟುಂಬದವರು ಯುವತಿಯ ಹಲ್ಲೆ ಮಾಡಿ ಬೆದರಿಸಿದ್ದಾರೆ. ಈ ಬಗ್ಗೆ ನೊಂದ ಯುವತಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಾಗಿರುವುದನ್ನು ತಿಳಿದ ಪ್ರೀಯಕರ ಹಾಗೂ ಕುಟುಂಬದವರು ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಪೊಲೀಸರು ಒಂದು ತಿಂಗಳ ಹಿಂದೆ ದೂರು ದಾಖಲಿಸಿಕೊಂಡಿದ್ದರೂ ಯುವಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ಬಳಿ ಕೇಳಲು ಹೋದರೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ನೊಂದ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

love dhoka sex dhoka ಅಸಮಾಧಾನ ಮ್ಯಾನೇಜರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ