ಮಾಜಿ ಸಂಸದ ಶಿವರಾಮೇಗೌಡ, ವಿರೂಪಾಕ್ಷಪ್ಪ ಕಾಂಗ್ರೆಸ್ ಗೆ

ex-Mp shivarame gowda, virupakshappa joined congress

25-04-2018

ಬೆಂಗಳೂರು: ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸೇರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದ ಮಾಜಿ ಲೋಕಸಭಾ ಸದಸ್ಯ ವಿರೂಪಾಕ್ಷಪ್ಪ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಶಿವರಾಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಸೇರ್ಪಡೆ ಸಂಬಂಧ ಭೇಟಿ ಮಾಡಿದ ಬಳಿಕ ಮಾತನಾಡಿದ ವಿರೂಪಾಕ್ಷಪ್ಪ, ನಾನು ಆಸೆ ಇಟ್ಟುಕೊಂಡಿದ್ದು ಅಲ್ಲಿ ಸಿಗಲಿಲ್ಲ. ನಾನು ಬ್ರಿಗೇಡ್ ಗೆ, ಬಿಜೆಪಿಗೆ ಕೈಕೊಟ್ಟಿಲ್ಲ. ಬಿಜೆಪಿಯವರೇ ನನ್ನನ್ನ ಕೈಬಿಟ್ಟಿದ್ದಾರೆ ಎಂದು ದೂರಿದರು. ವಿರೂಪಾಕ್ಷಪ್ಪ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದರು.

ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರ್ಪಡೆಯಾದ ಅವರು, ಈಶ್ವರಪ್ಪ ನವರು ನಮ್ಮನ್ನ ಕೈಬಿಟ್ಟರು. ಅವರು ಏನು ಅನ್ನೋದು ನಿಮಗೇ ಗೊತ್ತಿದೆ ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ವಲ್ಪ ಕಾಲ ತಟಸ್ಥವಾಗಿತ್ತು. ಇದೀಗ ಮತ್ತೆ ಬ್ರಿಗೇಡ್ ಗೆ ಚಾಲನೆ ಸಿಗಲಿದೆ. ಬ್ರಿಗೇಡ್ ಒಂದು ಸ್ವಯಂ ಸಂಘಟನೆ. ಕಾಂಗ್ರೆಸ್ ಜೊತೆ ಮರ್ಜ್ ಮಾಡೋಕೆ ಬರುವುದಿಲ್ಲ ಎಂದು ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದರು.

ಇದೇ ವೇಳೆ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ. ನಾನು ಜನತಾಪರಿವಾರದಿಂದ ಬಂದವನು. ಕರಡಿ ಸಂಗಣ್ಣ ಆವರಿಗೆ, ಅವರ ಮಗನಿಗೆ ಕೊಪ್ಪಳದಲ್ಲಿ ಟಿಕೆಟ್ ಕೊಡ್ತಾರೆ. ನಮಗೆ ಯಾವ ಬೆಲೆಯನ್ನೂ ಕೊಡೋದಿಲ್ಲ, ಅಂತ ಕಡೆ ನಾವ್ಯಾಕೆ ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ