ಮೈಸೂರಿಗೆ ಮಾಯಾವತಿ

BSP leader mayavthi campain at mysore

25-04-2018

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿದೆ. ಈ ನಡುವೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳ ಪ್ರಚಾರ ಬಿರುಸುಗೊಂಡಿದೆ.

ಸಿಎಂ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಕಾಂಗ್ರೆಸ್ ಹಣಿಯಲು ಬಿಎಸ್ಪಿ ತಯಾರಿ ನಡೆಸಿದ್ದು, ದಲಿತ ಮತಗಳನ್ನ ಸೆಳೆಯುವ ಉದ್ದೇಶದಿಂದ ಜೆಡಿಎಸ್ ಬಿಎಸ್ಪಿ ಜೊತೆ ಕೈಜೋಡಿಸಿದೆ. ಇವೆರೆಡು ಒಟ್ಟಾಗಿ ಮೈಸೂರಿನಲ್ಲಿ ರಣಕಹಳೆ ಮೊಳಗಿಸಲಿವೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಎಸ್ಪಿ ನಾಯಕಿ ಮಾಯಾವತಿ ಮೈಸೂರಿಗೆ ಆಗಮಿಸಲಿದ್ದಾರೆ.  ದಲಿತ ಮತಗಳನ್ನ ಸೆಳೆಯಲು ಜೆ ಡಿಎಸ್ ಬಿಎಸ್ಪಿ ಜತೆ  ಮೈತ್ರಿ ಮಾಡಿಕೊಂಡಿದೆ.

ರಾಜ್ಯದಲ್ಲಿ ಜೆಡಿಎಸ್-ಬಿಎಸ್ಪಿ ಮೈತ್ರಿ ಹಿನ್ನೆಲೆ ಮೈಸೂರಿಗೆ ಆಗಮಿಸಲಿರುವ ಮಾಯಾವತಿ ಅವರು, ದಲಿತ ಮುಖಂಡರ ಜೊತೆ ಮಹತ್ವದ ಚರ್ಚೆ ನಡೆಸಿ ಬಳಿಕ ಮೂರು ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಜೆಡಿಎಸ್,ಬಿಎಸ್ಪಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mayawati BSP ಚಾಮರಾಜನಗರ ರಣಕಹಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ