ಭಾರೀ ಮಳೆಗೆ ಧರೆಗುರುಳಿದ ಮರ

heavy rain in bangalore: a tree fallen on car

24-04-2018

ಬೆಂಗಳೂರು: ಮಧ್ಯಾಹ್ನ ನಗರದಾದ್ಯಂತ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಸಂಜಯ್ ನಗರ ಪೊಲೀಸ್ ಠಾಣೆ ಮುಂಭಾಗ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಜಖಂ ಗೊಂಡಿದೆ. ಮಧ್ಯಾಹ್ನ 2:15ರ ಸುಮಾರಿಗೆ ನಡೆದ ಘಟನೆಯಾಗಿದ್ದು, ಅದೃಷ್ಟವಶಾತ್ ಈ ವೇಳೆ ಕಾರ್ನಲ್ಲಿ ಯಾರು ಇರಲಿಲ್ಲ. ಮರ ರಸ್ತೆಗೆ ಉರುಳಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದ್ದು, ಅಕ್ಕ ಪಕ್ಕದಲ್ಲಿನ ವಿದ್ಯುತ್ ತಂತಿಗಳು ಸೇರಿದಂತೆ ಇತರೆ ವೈರುಗಳಿಗೆ ಹಾನಿಯಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಸಂಬಂಧಿತ ಟ್ಯಾಗ್ಗಳು

tree car ಪ್ರಾಣಾಪಾಯ ಸಂಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ