ಬಾದಾಮಿ:ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

siddaramaiah files nomination in badami

24-04-2018

ಬೆಂಗಳೂರು: ಚಾಲುಕ್ಯರ ನಾಡು ಬದಾಮಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಾಮಪತ್ರ ಸಲ್ಲಿಸಿದರು. ವಿಶೇಷ ವಿಮಾನದಲ್ಲಿ ಮೈಸೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಮಾನ ನಿಲ್ದಾಣದಿಂದ ನೇರವಾಗಿ ಬದಾಮಿ ಕಡೆ ಪ್ರಯಾಣ ಬೆಳೆಸಿದರು.

ರಸ್ತೆ ಮಾರ್ಗವಾಗಿ ಬಂದ ಮುಖ್ಯಮಂತ್ರಿಯವರಿಗೆ ಹುಬ್ಬಳ್ಳಿಯಿಂದ ಬದಾಮಿಯವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಎಲ್ಲ ಗ್ರಾಮ, ಪಟ್ಟಣಗಳಲ್ಲಿ ರಸ್ತೆಯ ಎರಡೂ ಕಡೆ ಮುಖ್ಯಮಂತ್ರಿಯವರಿಗಾಗಿ ಕಾದು ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಗೂ ಜನತೆ ಭರ್ಜರಿಯಾಗಿ ಸ್ವಾಗತ ಕೋರಿದರು.

ಹೂ ಮಳೆ ಸುರಿಸಿ ಮುಖ್ಯಮಂತ್ರಿಯವರನ್ನು ಬರ ಮಾಡಿಕೊಂಡ ಜನರು ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿದರು. ಮುಖ್ಯಮಂತ್ರಿಯವರು ಬದಾಮಿ ಪ್ರವೇಶಿಸುತ್ತಿದ್ದಂತೆ ಸಾವಿರಾರು ಎತ್ತಿನ ಗಾಡಿಗಳಲ್ಲಿ ಬಂದಿದ್ದ ಅಭಿಮಾನಿಗಳು ಜಯಘೋಷದೊಂದಿಗೆ ಸ್ವಾಗತ ಕೋರಿದರು.

ಬಳಿಕ ಮುಖ್ಯಮಂತ್ರಿಯವರು ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ತಹಶೀಲ್ದಾರರ ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು. ನಂತರ ಅಪಾರ ಜನಸ್ತೋಮದೊಂದಿಗೆ ಮುಖ್ಯಮಂತ್ರಿಯವರು ಬದಾಮಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.


ಸಂಬಂಧಿತ ಟ್ಯಾಗ್ಗಳು

siddaramaiah badami ಕಚೇರಿ ಜನಸ್ತೋಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ