ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ

fight between 3 friends: one killed

24-04-2018

ಬೆಂಗಳೂರು: ಸಿಟಿ ಮಾರುಕಟ್ಟೆಯ ಸೀಗೆಬೇಲಿ ರಸ್ತೆಯ ಖುರೇಷಿ ಮಸೀದಿ ಬಳಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಸ್ನೇಹಿತ ಅಸ್ಸಾಂ ಮೂಲದ ಅಬ್ಬು ಅಲಿಯಾಸ್ ನಜ್ಮಲ್ ಹುಸೇನ್ ಎಂಬಾತನ ಕಿಬ್ಬೊಟ್ಟೆಗೆ ಇರಿದು ಕೊಲೆ ಮಾಡಿರುವ ಯುವಕನೊಬ್ಬ ಪರಾರಿಯಾಗಿದ್ದಾನೆ.

ಅಸ್ಸಾಂ ಮೂಲದ ಅಬ್ಬು ಅಲಿಯಾಸ್ ನಜ್ಮಲ್ ಹುಸೇನ್ (20) ನನ್ನು ಕೊಲೆಗೈದು ಪರಾರಿಯಾಗಿರುವ ಮಣಿಪುರ ಮೂಲದ ಜುಮ್ಮಾಖಾನ್‍ಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಶಿವಾಜಿನಗರದ ಜ್ಯೂಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿ ಅಬ್ಬುಗೆ ಸೀಗೆಬೇಲಿ ರಸ್ತೆಯ ಇಂಡಿಯನ್ ಪೌಲ್ಟ್ರಿ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮೊಮಾಯ್ ಸ್ನೇಹಿತನಾಗಿದ್ದ. ಇವರಿಬ್ಬರಿಗೆ ಮತ್ತೊಬ್ಬ ಮಣಿಪುರ ಮೂಲದ ಜುಮ್ಮಾಖಾನ್ ಸ್ನೇಹಿತನಾಗಿದ್ದ.

ಮೊಮಾಯ್ ತನ್ನ ಪೌಲ್ಟ್ರಿ ಸೆಂಟರ್ ನ ಪಕ್ಕದ ಸಾಯಿ ಲಾಡ್ಜ್‍ ನಲ್ಲಿ ಉಳಿದುಕೊಂಡಿದ್ದ. ಆಗಾಗ ಅಬ್ಬು ಹಾಗೂ ಜುಮ್ಮಾಖಾನ್ ಅಲ್ಲಿಗೆ ಹೋಗಿ ಬರುತ್ತಿದ್ದರು. ರಾತ್ರಿ 9ರ ವೇಳೆ ಮೂವರು ಸ್ನೇಹಿತರು ಒಟ್ಟಿಗೆ ಸೇರಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ವೇಳೆ ಜಗಳ ನಡೆದಿದ್ದು, ಆಕ್ರೋಶಗೊಂಡ ಜುಮ್ಮಾಖಾನ್ ಅಬ್ಬುವಿನ ಕಿಬ್ಬೊಟ್ಟೆಗೆ ಇರಿದು ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು ಪರಾರಿಯಾಗಿರುವ ಜುಮ್ಮಾಖಾನ್‍ಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ರವಿಚೆನ್ನಣ್ಣವರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder blood ರವಿಚೆನ್ನಣ್ಣವರ್ ಮಾರುಕಟ್ಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ