ಈ ತಿಂಗಳ ಅಂತ್ಯದ ವೇಳೆಗೆ ಮತದಾರರ ಪಟ್ಟಿ!

voters list to be in this month end!

24-04-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತಿದ್ದಂತೆ ಈ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆದು ಹಾಕುವ ಪ್ರಕ್ರಿಯೆ ಕೂಡ ಇದೇ ಸಂದರ್ಭದಲ್ಲಿ ವಿಧ್ಯುಕ್ತವಾಗಿ ಕೊನೆಗೊಂಡಿದೆ.

ಅಪರಾಹ್ನ 3 ಗಂಟೆಯ ನಂತರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆದುಹಾಕುವುದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮತದಾರರ ಪಟ್ಟಿ ಬಹುತೇಕ ಈ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಆಯೋಗ ತೀರ್ಮಾನಿಸಿದೆ. ಮತದಾನಕ್ಕೆ 17 ದಿನ ಬಾಕಿ ಇರುವ ಮೊದಲೇ ಎಲ್ಲಾ ಹೊಸದಾಗಿ ನೋಂದಣಿಯಾದ ಅರ್ಹ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಅರ್ಹರಿಗೆ ಮತದಾರರ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆ ಆರಂಭಗೊಂಡಿದೆ.


ಸಂಬಂಧಿತ ಟ್ಯಾಗ್ಗಳು

voters list candidates ಸ್ಥಗಿತ ನಾಮಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ