ಗಾರ್ಮೆಂಟ್ಸ್ ಕಾರ್ಖಾನೆಗೆ ಬೆಂಕಿ: ಅಪಾರ ನಷ್ಟ

fire at garment factory at kr puram

24-04-2018

ಬೆಂಗಳೂರು: ಕೆ.ಆರ್.ಪುರಂನ ಅಕ್ಷಯ ನಗರದ ಬೇಬಿ ಗಾರ್ಮೆಂಟ್ಸ್ ಕಾರ್ಖಾನೆಗೆ ನಿನ್ನೆ ರಾತ್ರಿ ಬೆಂಕಿ ತಗುಲಿ ಕೋಟ್ಯಂತರ ಮೌಲ್ಯದ ಸಿದ್ಧ ಉಡುಪುಗಳು, ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ. ರಾತ್ರಿ 11.30ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತಗುಲಿದ ಬೆಂಕಿ ಸ್ವಲ್ಪ ಹೊತ್ತಿನಲ್ಲಿಯೇ ಇಡೀ ಗಾರ್ಮೆಂಟ್ಸ್ ಆವರಿಸಿ ದಟ್ಟ ಹೊಗೆ, ಬೆಂಕಿ ಹೊರ ಬರಲಾರಂಭಿಸಿದೆ.

ಇದನ್ನು ನೋಡಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು 4 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದೆ. ಬೆಂಕಿಯಿಂದ ಸುಮಾರು 1 ಕೋಟಿ 30 ಲಕ್ಷ ನಷ್ಟವುಂಟಾಗಿದೆ ಎಂದು ಶಂಕಿಸಲಾಗಿದ್ದು, ಗಾರ್ಮೆಂಟ್ಸ್ ಮಾಲೀಕ ಕಾಂತಿಲಾಲ್ ಅವರು ನೀಡಿರುವ ದೂರು ದಾಖಲಿಸಿರುವ ಕೆಆರ್ ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Garments short circuit ಅಗ್ನಿಶಾಮಕ ಉಡುಪು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ