ಅಪಾರ ಹಣ, ಅಗಾಧ ಮದ್ಯ ವಶ

illegal liquor, money, seized by election officers

24-04-2018

ಬೆಂಗಳೂರು: ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳದಲ್ಲಿದ್ದ 12,537 ಗೋಡೆ ಬರಹಗಳು, 17,693, ಪೋಸ್ಟರ್ ಗಳು ಮತ್ತು 7,711 ಬ್ಯಾನರ್‍ ಗಳನ್ನು ತೆರವುಗೊಳಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ 2,91,30,713 ರೂ.ಗಳ ನಗದು, 3ಲಕ್ಷಮೌಲ್ಯದ 1 ವಾಹನ, 23 ಸಾವಿರ ಮೌಲ್ಯದ 17 ರೇಷ್ಮೆ ಸೀರೆಗಳು, 4 ಲಕ್ಷ ಮೌಲ್ಯದ 168 ಸೀರೆಗಳನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 35,07,50,910 ರೂ. ನಗದು, 1,76,80 ಸಾವಿರ ಮೌಲ್ಯದ 7 ಕೆಜಿ 704 ಗ್ರಾಂ ಚಿನ್ನ, 11,47,200 ರೂ. ಮೌಲ್ಯದ ಬೆಳ್ಳಿ, ಒಟ್ಟು 1,89,63,409 ರೂ. ಮೌಲ್ಯದ 24.09 ಲೀಟರ್ ಮದ್ಯ, ವಾಹನ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿವೆ. 

ಅಲ್ಲದೇ, ಫ್ಲೈಯಿಂಗ್ ಸ್ಕ್ವಾಡ್‍ಗಳು 82,61,900 ರೂ. ನಗದು, 1,063 ರೂ. ಮೌಲ್ಯದ 3.24 ಲೀಟರ್ ಮದ್ಯ, 2,74,000 ರೂ. ಮೌಲ್ಯದ 4 ವಾಹನಗಳು, 274 ಸೀರೆಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ ಇತರೆ ಪೊಲೀಸ್ ಪ್ರಾಧಿಕಾರಿಗಳು ಒಟ್ಟಾರೆ 16,50,000 ರೂ. ನಗದು ಮತ್ತು 10 ಸೀರೆ, 160 ಲ್ಯಾಪ್‍ಟಾಪ್ ಮತ್ತು 509.02 ಲೀ. ಮದ್ಯವನ್ನು ವಶಪಡಿಸಿಕೊಂಡಿವೆ.

ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ, ಎಸ್‍ಎಸ್‍ಟಿ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು 38,43,00,567 ರೂ. ನಗದನ್ನು ವಶಪಡಿಸಿಕೊಂಡಿವೆ. ಕಳೆದ 24 ಗಂಟೆಗಳಲ್ಲಿ 25 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್‍ಗಳು 449 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಎಸ್‍ಎಸ್‍ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 2 ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿದೆ. ಒಟ್ಟು 87 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

ಅಬಕಾರಿ ಇಲಾಖೆಯು 41921.59 ಲೀ. ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು 2,04,93,244 ರೂ. ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡು 79 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಗಿ ಉಲ್ಲಂಘಿಸಿದ 39 ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 267 ಪ್ರಕರಣಗಳನ್ನು ದಾಖಲಿಸಿದೆ.

ಒಟ್ಟಾರೆ 16,95,98,583 ರೂ. ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯ ಸೇರಿ 354035.572 ಲೀ.ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ 1615 ಪ್ರಕರಣಗಳು, 1247 ಪ್ರಕರಣಗಳು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 2987 ಪ್ರಕರಣಗಳನ್ನು ಹಾಗೂ ಎನ್‍ಡಿಪಿಎಸ್ ಕಾಯ್ದೆಯಡಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಿಆರ್‍ಪಿಸಿ ಕಾಯ್ದೆಯಡಿ 694 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 850 ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿದೆ. 202 ಪ್ರಕರಣಗಳನ್ನು ಸಿಆರ್ಪಿಸಿ ಕಾಯ್ದೆಯಡಿ ದಾಖಲು ಮಾಡಲಾಗಿದೆ. 855 ನಾಕಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಒಟ್ಟಾರೆ 71562 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಈವರೆಗೆ ಒಟ್ಟು 97,037 ಶಸ್ತ್ರಾಸ್ತ್ರಗಳ ಪೈಕಿ 97019 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 52 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಟ್ಟು 6 ಶಸ್ತ್ರಾಸ್ತ್ರದ ಪರವಾನಗಿಯನ್ನು ರದ್ದುಪಡಿಸಲಾಗಿದೆ.

ಸಿಆರ್‍ಪಿಸಿ ಕಾಯ್ದೆಯಡಿ 15,644 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 17,864 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 30,561 ಜಾಮೀನು ರಹಿತ ವಾರೆಂಟ್‍ಗಳನ್ನು ಈವರೆಗೆ ಹೊರಡಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

flying squad election ಮುಚ್ಚಳಿಕೆ ವಾರೆಂಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ