ಅಮಿತ್ ಷಾ ವಿರುದ್ಧ ರೈ ಕೆಂಡಾಮಂಡಲ!

amit shah v/s Prakash Raj

24-04-2018

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯ ಭಾಷೆ ಬಳಕೆ ಮಾಡಲಾಗುತ್ತಿದೆ, ಚಾರಿತ್ರ್ಯಹರಣ, ಮಾನ ಕಳೆಯುವ ಕೆಲಸ ನಡೆಯುತ್ತಿದೆ, ಇಂಥಹ ವರ್ತನೆ ನಿಜಕ್ಕೂ ಸರಿಯಾದದ್ದಲ್ಲ ಎಂದು ಬಹು ಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅಸಹ್ಯವಾದ ಮಾತನ್ನಾಡುತ್ತಾರೆ, ಹೆಂಡತಿ ಬಗ್ಗೆ, ಮಗುವಿನ ಸಾವಿನ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುತ್ತಾರೆ, ಸಂಸದರು ಮಾತನಾಡುವ ರೀತಿ ಇದೆಯೇ.? ಹೆಣ್ಣು ಮಕ್ಕಳಿದ್ದಾರೆ, ಯುವಕರಿದ್ದಾರೆ, ಇವರಿಗೆಲ್ಲಾ ಸಂಸದರು ತೋರಿಸುವ ದಾರಿ ದೀಪ ಇದೆನಾ..? ಎಂದು ಪ್ರತಾಪ್ ಸಿಂಹ ವಿರದ್ಧ ಪ್ರಕಾಶ್ ರೈ ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಬಿಎಸ್ ವೈ ಅಧಿಕಾರದಲ್ಲಿ ಇರಲ್ಲ, ಬಿಎಸ್ ವೈ ಮಗನಿಗೆ ಟಿಕೆಟ್ ಕೊಡಲಿಲ್ಲ ಅಂತಾ 8 ಅಭ್ಯರ್ಥಿಗಳು ಗಲಾಟೆ ಮಾಡುತ್ತಾರಂತೆ, ಮಗನಿಗಾಗಿ ಏನು ಬೇಕಾದರೂ ಮಾಡುತ್ತಾರೆ, ಅಮಿತ್ ಷಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ ಬಂದರೆ ಬಿ.ಎಸ್.ವೈ ಕೈಕಟ್ಟಿ ನಿಲ್ಲುತ್ತಾರೆ, ಕನ್ನಡಿಗರಿಗೆ ಸ್ವಾಭಿಮಾನ ಇಲ್ವೇ,? ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಬಂದರೂ ಬಿಎಸ್ವೈ ಮೂರೇ ತಿಂಗಳು ಇರೋದು. ವಾಮಮಾರ್ಗದಿಂದ ಅಧಿಕಾರ ಹಿಡಿಯುವುದೇ ಚಾಣುಕ್ಯತನನಾ..? ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ ನಡೆಸಿದರು.

ಕರಾವಳಿಗರು ತುಂಬಾ ಶಾಂತಿಪ್ರಿಯರು ಕೋಮುಗಲಭೆ, ಗಲಾಟೆ ಇಲ್ಲಿನ ಜನರು ಇಷ್ಟಪಡಲ್ಲ, ಬಿಜೆಪಿ ಮಾರಣಾಂತಿಕ ಕಾಯಿಲೆ ತರುವಂಥ ಪಕ್ಷ, ಇಂಥ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು, ನಾನು ಎಲ್ಲಾ ಭಾಷೆಗಳಲ್ಲಿ, ಭಾವಗಳಲ್ಲಿಯೂ ಇದನ್ನೇ ಹೇಳುತ್ತಿರುವುದು. ನನ್ನನ್ನು ದ್ವೇಷದಿಂದ ಕೊಲ್ತೀರಾ, ನನಗೆ ಭಯವಿಲ್ಲ, ನಾನು ಎಲ್ಲಾ ಮಾಡಿಯಾಗಿದೆ, ಹಣ ಮಾಡಿದ್ದೇನೆ, ನಟಿಸಿಯಾಗಿದೆ, ಜೀವನದಲ್ಲಿ ಎಲ್ಲವೂ ಆಗಿದೆ.

ಧರ್ಮದ ಆಧಾರದ ಮೇಲೆ ಹೀಗೆ ಮುಂದುವರೆದರೆ ಮುಂದೊಂದು ದಿನ ಭಾರತವು ಪಾಕಿಸ್ತಾನವಾಗಲಿದೆ, ನಾನು ಯಾವುದೇ ರಾಜಕೀಯ ಪಕ್ಷದವನಲ್ಲ, ನಾನು ಪ್ರತಿಭೆಯಿಂದ ಬೆಳೆದವನಲ್ಲ, ಜನರಿಂದ ಬೆಳೆದದ್ದು ಎಂದು ಸಂವಾದದುದ್ದಕ್ಕೂ ನಾನು ಹಿಂದೂ ವಿರೋಧಿಯಲ್ಲ ಎಂದು ಸಮರ್ಥಿಸಿಕೊಂಡರು ರೈ.

ನನ್ನನ್ನು ಹಿಂದೂ ವಿರೋಧಿ ಅಂತಾ ಬಿಜೆಪಿ ಹಣೆಪಟ್ಟಿ ಕಟ್ಟುತ್ತಿದೆ, ಇದನ್ನು ಯಾರೂ ನಂಬಬೇಡಿ ಎಂದು ಮನವಿ ಮಾಡಿದರು. ಬಿಜೆಪಿ ಶಾಂತಿಯುತವಾಗಿ ಚುನಾವಣೆ ನಡೆಸಿಲ್ಲ ಮೇ 13ರೊಳಗೆ ರಾಜ್ಯದಲ್ಲಿ ಗಲಭೆ ನಡೆಯುವ ಸಾಧ್ಯತೆ ಇದೆ, ಇದು ಅಮಿತ್ ಷಾ ನಡೆಸುವಂತಹ ರಾಜಕಾರಣ ಗಲಾಟೆಯಾಗಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ, ಬಿಎಸ್ ವೈಗಿಂತ ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ, ನನ್ನ ಅಭಿಯಾನ ಬಿಜೆಪಿಗೆ ಲಾಭ ಆಗದಿದ್ದರೆ ಸಾಕು ಎಂದರು.


ಸಂಬಂಧಿತ ಟ್ಯಾಗ್ಗಳು

Prakash Raj Amit Shah ಅಭಿಯಾನ ಬಿಎಸ್ ವೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ