'ನನ್ನ ಮಗ ವರುಣಾದಲ್ಲಿ ಸ್ಪರ್ಧಿಸಲ್ಲ’-ಜಿಟಿಡಿ24-04-2018

ಮೈಸೂರು: ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಅಂತ ಜನ ಉತ್ಸಹದಿಂದ ಇದ್ದರು. ಇದೀಗ ವಿಜಯೇಂದ್ರಗೆ ಟಿಕೆಟ್ ನೀಡದ ಹಿನ್ನೆಲೆ, ಅ ಭಾಗದ ಜನರು ನಮ್ಮ ಮನೆಗೆ ಬಂದು ತನ್ನ ಮಗ ಹರೀಶ್ ಗೌಡ ಅವರನ್ನು ನಿಲ್ಲಿಸಿ ಅಂತಿದ್ದಾರೆ ಎಂದು ಜೆಡಿಎಸ್ ಮುಖಂಡ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಈ ಕುರಿತು ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಂದು ರೂಪಾಯಿ ಹಣ ನೀಡಬೇಡಿ ನಾವು ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಜಿ.ಪಂ ಸದಸ್ಯರು ರಾಜೀನಾಮೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ವರುಣಾದಲ್ಲಿ ಪುತ್ರ ಹರೀಶ್ ಗೌಡ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ ಜಿ.ಟಿ.ದೇವೇಗೌಡರು, ವರಣಾ ಜನತೆಗೆ ನಾನು ಕ್ಷಮೆ ಕೇಳುತ್ತೇನೆ ಹರೀಶ್ ಗೌಡ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹರೀಶ್ ಗೌಡ ನನ್ನ ಜತೆ ಕೆಲಸ ಮಾಡ್ತಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ