ಗಣಿಗ ಪಿ ರವಿಕುಮಾರ್ ಗೌಡ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ

kpcc given mandya ticket to ravikumar p ganiga!

24-04-2018

ಮಂಡ್ಯ: ಮಂಡ್ಯ ಶಾಸಕ ಹಾಗು ನಟ ಅಂಬರೀಶ್ ವರ್ತನೆಗೆ ಬೇಸತ್ತ ಕಾಂಗ್ರೆಸ್ ಹೈ ಕಮಾಂಡ್ ಗಣಿಗ ಪಿ.ರವಿಕುಮಾರ್ ಗೌಡ ಅವರಿಗೆ ಟಿಕೆಟ್ ನೀಡಿದೆ. ಶಾಸಕ ಅಂಬರೀಶ್ ಅವರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಿಸಿತ್ತು. ಆದರೆ, ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಯಾರಿಗೂ ಬೆಂಬಲಿಸುವುದಿಲ್ಲ, ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ ಎಂಬುದನ್ನು ತಮ್ಮ ಆಪ್ತ ಮೂಲಗಳು ತಿಳಿಸಿದ್ದವು. ಕೆಪಿಸಿಸಿ ಅಧ್ಯಕ್ಷರ ಮನೆಗೆ ಬರುವಂತೆ ಅಂಬಿಯನ್ನ ಆಹ್ವಾನಿಸಿದರೂ ಕ್ಯಾರೆ ಅನ್ನದ ಅಂಬಿ ಯಾರ ಕೈಗೂ ಸಿಗದೇ ನಾಮಪತ್ರವೂ ಸಲ್ಲಿಸದೇ ಇರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ.

ಇದೀಗ ಮಂಡ್ಯದ ಕಾಂಗ್ರೆಸ್ ಟಿಕೆಟ್ ರವಿ ಕುಮಾರ್ ಪಿ.ಗಣಿಗ ಪಾಲಾಗಿದೆ. ಅಂಬಿ ವರ್ತನೆಗೆ ಬೇಸತ್ತ ಕೈ ಹೈ ಕಮಾಂಡ್ ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದಾರೆ. ಇದೇ ವೇಳೆ ಗಣಿಗ ರವಿಕುಮಾರ್ ಪರ ಚೆಲುವರಾಯಸ್ವಾಮಿ ಬ್ಯಾಟಿಂಗ್ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಾಯಕತ್ವವನ್ನು ಚೆಲುವರಾಯಸ್ವಾಮಿ ಹೆಗಲಿಗೆ ಹೊರಿಸಿದೆ ಕಾಂಗ್ರೆಸ್ ಹೈ ಕಮಾಂಡ್.


ಸಂಬಂಧಿತ ಟ್ಯಾಗ್ಗಳು

Ambareesh KPCC ಶಾಸಕ ರವಿ ಕುಮಾರ್ ಪಿ. ಗಣಿಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ