ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ?

witchcraft in front of Congress leader

24-04-2018

ದಕ್ಷಿಣ ಕನ್ನಡ: ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ ನಡೆದಿದೆ ಎನ್ನಲಾದ ಘಟನೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ ಬಳಿ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಸದಸ್ಯರಾಗಿರುವ ಕೆಎಂ ಅಬ್ದುಲ್ ಕರೀಂ ಅವರ ಮೆನೆ ಮೇಲೆ ವಾಮಾಚಾರ ಪ್ರಯೋಗ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಸುಮಾರು ಹನ್ನೆರಡು ಮೂವತ್ತರಲ್ಲಿ ಮನೆ ಮುಂದು ಬಂದು ನಿಂಬೆ ಹಣ್ಣುನ್ನು ತುಂಡರಿಸಿ ಎಸೆದು ಹೋಗಿದ್ದಾರೆ ಎನ್ನಲಾಗಿದ್ದು, ಓರ್ವ ವ್ಯಕ್ತಿ ಬಂದು ನಿಂಬೆಹಣ್ಣು ಬಿಸಾಕಿ ಹೋಗಿದ್ದನ್ನು ಕಿಟಕಿಯಿಂದ ನೋಡಿರುವುದಾಗಿ ಕರೀಂ ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತ ರಾಜು ಪ್ರಕಾಶ್ ವಾಮಾಚಾರ ಮಾಡಿಸಿರುವುದಾಗಿ ಅಬ್ದುಲ್ ಕರೀಂ ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ