‘ಸಮೀಕ್ಷೆಗಳನ್ನು ನಾನು ಅಷ್ಟಾಗಿ ನಂಬಲ್ಲ’-ಸಿಎಂ24-04-2018

ಮೈಸೂರು: ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಗೊಂದಲ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ಟಿಕೆಟ್ ಬಗ್ಗೆ ಮಾತನಾಡೋದಕ್ಕೆ ನಾನು ಆ ಪಕ್ಷದ ವಕ್ತಾರ ಅಲ್ಲ. ವರುಣಾದಲ್ಲಿ ಬಿಜೆಪಿಯ ಯಾವ ಅಭ್ಯರ್ಥಿ ನಿಲ್ಲಿಸಿದರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಡಿಯೂರಪ್ಪ ವೀಕ್ ಆಗಿಲ್ಲ, ಯಡಿಯೂರಪ್ಪ ಯಾವಾಗಲೂ ವೀಕ್. ಯಡಿಯೂರಪ್ಪ ಕಳಂಕಿತ ವ್ಯಕ್ತಿ, ಆದ್ದರಿಂದ ಅವರಿಗೆ ಸಾರ್ವಜನಿಕ ಮೌಲ್ಯ ಇಲ್ಲ. ಹಿಂದೆಯೂ ವೀಕ್ ಆಗಿಯೇ ಇದ್ದರೂ ಈಗಲೂ ವೀಕ್ ಆಗಿಯೇ ಇದ್ದಾರೆ ಎಂದು ಕುಟುಕಿದ್ದಾರೆ.

ನಾವು ವಂಶಪಾರಂಪರ್ಯ ರಾಜಕೀಯ ಮಾಡಲ್ಲ ಎಂಬ ಬಿಜೆಪಿ ಮುಖಂಡರ ಹೇಳಿಕೆ ಕುರಿತು, ರಾಘವೇಂದ್ರ ಯಾರ ಮಗ ? ಒಂದು ಬಾರಿ ಎಂಪಿ, ಒಂದು ಬಾರಿ ಎಂಎಲ್‌ಎ ಆಗಿಲ್ವ ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಚುನಾವಣಾ ಪೂರ್ವ ಸಮೀಕ್ಷೆಗಳ‌ ಕುರಿತು ಪ್ರತಿಕ್ರಿಯಿಸಿದ ಸಿಎಂ ನಾನು ಸಮೀಕ್ಷೆಗಳನ್ನು ಅಷ್ಟಾಗಿ ನಂಬಲ್ಲ. ಆದರೆ ಜನರ ಮನಸ್ಸಿನಲ್ಲಿ ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ ಎಂದು ನುಡಿದರು. ಇದೇ ವೇಳೆ ಶಾಸಕ ಅಂಬರೀಶ್ ಕುರಿತು ಮಾತನಾಡಲು ನಿರಾಕರಿಸಿದರು.

 


ಸಂಬಂಧಿತ ಟ್ಯಾಗ್ಗಳು

siddaramaiah Ambareesh ವಂಶ ಪಾರಂಪರ್ಯ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ