ಬೆಳಗಾವಿ ಉತ್ತರ ಕ್ಷೇತ್ರದಿಂದ ಸಂಭಾಜಿ ಪಾಟೀಲ್ ಸ್ಪರ್ಧೆ?

sambhaji patil contesting from belgaum north?

24-04-2018

ಬೆಳಗಾವಿ: ಕಾಂಗ್ರೆಸ್ ಹಾಗು ಬಿಜೆಪಿಗೆ ಸೆಡ್ಡು ಹೊಡೆಯಲು ಎಂಇಎಸ್ ರಣತಂತ್ರ ರೂಪಿಸಿದೆ. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಹಾಲಿ ಎಮ್ಇಎಸ್ ಶಾಸಕ ಸಂಭಾಜೀ ಪಾಟೀಲ್ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಂಭಾಜೀ ಪಾಟೀಲ್ರನ್ನು ಆಯ್ಕೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಕಾಂಗ್ರೆಸ್ ನ ಫಿರೋಜ್ ಸೇಠ್ ಉತ್ತರ ಮತಕ್ಷೇತ್ರದ ಶಾಸಕ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜೀ ಪಾಟೀಲ್. ಈ ಬಾರಿ ಕ್ಷೇತ್ರ ಬದಲಾವಣೆ ಮಾಡಿ ಸ್ಪರ್ಧಿಸಲಿದ್ದಾರೆ. ಎಂಇಎಸ್ ಮುಖಂಡರು, ಕಾರ್ಯಕರ್ತರ ತೀರ್ಮಾನ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಂದು ಎಂಇಎಸ್ ಅಧಿಕೃತ ಅಭ್ಯರ್ಥಿಯಾಗಿ ಸಂಭಾಜೀ ಪಾಟೀಲ್ ನಾಮಪತ್ರ ಸಲ್ಲಿಸಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sambhaji Patil MES ಮುಖಂಡ ಕಾರ್ಯಕರ್ತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ