ಬಿಯರ್ ಬಾಟಲಿಯಿಂದ ಹೊಡೆದು ವ್ಯಕ್ತಿ ಕೊಲೆ

Horrific murder with with beer bottle

23-04-2018

ಬೆಂಗಳೂರು: ದೇವರಜೀವನಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಹಾಡಹಗಲೇ ಜೊತೆಯಲ್ಲಿ ಮದ್ಯಪಾನ ಮಾಡುತ್ತಿದ್ದ ಪೇಂಟರ್ ಒಬ್ಬರನ್ನು ಸ್ನೇಹಿತರೇ ಬಿಯರ್ ಬಾಟಲಿಯಿಂದ ಹೊಡೆದು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ದೇವರಜೀವನಹಳ್ಳಿಯ ಎಕೆ ಕಾಲೋನಿಯ ಚಂದ್ರು(32 )ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ, ಕೃತ್ಯವೆಸಗಿ ಪರಾರಿಯಾಗಿರುವ ಮೂವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಕೆಲಸಕ್ಕೆ ರಜೆ ಹಾಕಿ ಸ್ನೇಹಿತರೊಂದಿಗೆ ಚಂದ್ರು ಮದ್ಯ ಸೇವಿಸಲು ಮಧ್ಯಾಹ್ನ 12ರ ವೇಳೆ ಟ್ಯಾನರಿ ರಸ್ತೆಯ ಪ್ರಿಯಾ ಬಾರ್ಗೆ ಬಂದಿದ್ದರು ಬಾರ್ ಒಳಗೆ ಮದ್ಯ ಸೇವಿಸುವಾಗ ಅವರಲ್ಲೇ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಜೊತೆಯಲ್ಲಿದ್ದವರು ಚಂದ್ರು ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆತನನ್ನು ಕೊಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೊಂಡನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸೀರಾಜುದ್ದೀನ್ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Beer bottle ಭೀಕರ ಕೃತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ