ಯಶವಂತಪುರದಿಂದ ನಟ ಜಗ್ಗೇಶ್ ಸ್ಪರ್ಧೆ

Actor jaggesh contest from yeshwanthpur

23-04-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವ ಬಾದಾಮಿ ಹಾಗು ಅವರ ಪುತ್ರ ಯತೀಂದ್ರ ಸ್ಪರ್ಧಿಸಿರುವ ವರುಣಾ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡದೆ ಕುತೂಹಲ ಮೂಡಿಸಿದೆ.

ಒಟ್ಟು 224 ಕ್ಷೇತ್ರಗಳಲ್ಲಿ ಈಗಾಗಲೇ 215 ಕ್ಷೇತ್ರಗಳಿಗೆ ಮೂರು‌ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದ ಬಿಜೆಪಿ ಬಾಕಿ ಉಳಿದ 11 ಕ್ಷೇತ್ರಗಳಲ್ಲಿ ವರುಣಾ, ಬಾದಾಮಿ, ಸಕಲೇಶಪುರ, ಶಿಡ್ಲಘಟ್ಟ ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಭದ್ರಾವತಿಯಿಂದ ಜಿ.ಆರ್.ಪ್ರವೀಣ್ ಪಾಟೀಲ್, ಯಶವಂತಪುರದಿಂದ ಜಗ್ಗೇಶ್, ಬಿಟಿಎಂ ಲೇಔಟ್ ನಿಂದ ಲಲ್ಲೇಶ್ ರೆಡ್ಡಿ, ರಾಮನಗರದಿಂದ ಹೆಚ್.ಲೀಲಾವತಿ,  ಕನಕಪುರದಿಂದ ನಂದಿನಿಗೌಡ, ಬೇಲೂರಿನಿಂದ ಸುರೇಶ್ ಗೌಡ ಹಾಗು ಹಾಸನದಿಂದ ಪ್ರೀತಂ ಗೌಡಗೆ ಟಿಕೆಟ್ ನೀಡಲಾಗಿದೆ. ಸಿಎಂ ಪುತ್ರ ಸ್ಪರ್ಧಿಸುವ ವರುಣಾದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗು ಸಿಎಂ ಸ್ಪರ್ಧೆ ಮಾಡುವ ಎರಡನೇ ಕ್ಷೇತ್ರ ಬಾದಾಮಿಯಲ್ಲಿ ಸಂಸದ ಶ್ರೀರಾಮುಲು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು, ಈ ನಡುವೆ ವಿಜಯೇಂದ್ರ ಸ್ಪರ್ಧೆ ಮಾಡಲ್ಲ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದರೂ ಅಭ್ಯರ್ಥಿ ಯಾರು ಎನ್ನುವುದು ಬಹಿರಂಗವಾಗಿಲ್ಲ, ಪಟ್ಟಿಯಲ್ಲಿಯೂ ಈ ಎರಡು ಕ್ಷೇತ್ರ ಖಾಲಿ ಉಳಿಸಿ ಕುತೂಹಲ ಹೆಚ್ಚುವಂತೆ ಮಾಡಲಾಗಿದೆ.

ಯಶವಂತಪುರ ಕ್ಷೇತ್ರದಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಲಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬಂದಿದ್ದವು, ಶೋಭಾ ಟಿಕೆಟ್ ನೀಡಿದರೆ ನನಗೂ ನೀಡಬೇಕು ಎಂದು ಮತ್ತೋರ್ವ ಸಂಸದ ಕರಡಿ ಸಂಗಣ್ಣ ಕೂಡ ಬೇಡಿಕೆ ಇಟ್ಟಿದ್ದರು. ಇದೀಗ ಯಶವಂತಪುರಕ್ಕೆ ಜಗ್ಗೇಶ್ ಹೆಸರು ಪ್ರಕಟಿಸುವ ಮೂಲಕ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವದಂತಿಗೆ ತೆರೆ ಎಳೆಯಲಾಗಿದೆ.


ಸಂಬಂಧಿತ ಟ್ಯಾಗ್ಗಳು

Jaggesh Shobha Karandlaje ಕರಡಿ ಸಂಗಣ್ಣ ಕುತೂಹಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ