ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಕರ್ತವ್ಯಕ್ಕೆ ಹಾಜರು

after long time Lokayukta Justice Vishwanath Shetty entered office

23-04-2018

ಬೆಂಗಳೂರು: ಕಚೇರಿಯಲ್ಲಿಯೇ ಚಾಕು ಇರಿತಕ್ಕೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ 45 ದಿನಗಳ ನಂತರ ಇಂದು ಮತ್ತೆ ಕರ್ತವ್ಯಕ್ಕೆ  ಹಾಜರಾಗಿದ್ದು ಲೋಕಾಯುಕ್ತ ಕಚೇರಿಯ ಭದ್ರತೆಯನ್ನೂ ಬಿಗಿಗೊಳಿಸಲಾಗಿದೆ.

ಕಳೆದ ಮಾರ್ಚ್ 7ರಂದು ತುಮಕೂರು ಮೂಲದ ತೇಜ್‍ರಾಜ್ ಶರ್ಮಾ ಲೋಕಾಯುಕ್ತರ ಕಚೇರಿಗೆ ನುಗ್ಗಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರಗಳ ಕಾಲ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಸಂಪೂರ್ಣವಾಗಿ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕರ್ತವ್ಯಕ್ಕೆ ಹಾಜರಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಲೂ ಆ ಘಟನೆ ನನ್ನ ಕಣ್ಣ ಮುಂದೆಯೇ ಬರುತ್ತದೆ. ಅದೇ ಜಾಗದಲ್ಲಿ ಕುಳಿತರೆ ಮತ್ತೆ ಅದೇ ದೃಶ್ಯ ಕಣ್ಣಿಗೆ ಬೀಳುತ್ತದೆ ಎಂದು ಬೇರೆ ಕಡೆ ಕುಳಿತು ಕೆಲಸ ಮಾಡುತ್ತಿದ್ದೇನೆ. ಆರೋಗ್ಯ ಸುಧಾರಣೆಯಾಗಿರುವುದು ನನಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಿದ್ದೇನೆ. ಕೆಲಸ ಉಳಿಕೆಯಾಗಿ ಇಡುವ ಬದಲು ಸ್ವಲ್ಪ-ಸ್ವಲ್ಪ ಮಾಡಿಕೊಂಡು ಹೋಗುವುದು ಒಳ್ಳೆಯದು ಎಂಬ ಕಾರಣಕ್ಕೆ ಮತ್ತೆ ಹಾಜರಾಗಿದ್ದೇನೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vishwanath Shetty lokayukta ವಿಶ್ರಾಂತಿ ಗುಣಮುಖ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ