ನಟಿ ಕವಿತಾರಿಂದ ಸೈಬರ್ ಕ್ರೈಂಗೆ ದೂರು

actor kavitha register a complaint in cyber crime

21-04-2018

ಬೆಂಗಳೂರು: ತೆಲುಗು ಸಿನೆಮಾ ಉದ್ಯಮದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ತಿರುಗಿಬಿದ್ದಿದ್ದ ಸ್ಯಾಂಡಲ್ ವುಡ್ ನಟಿ ಕವಿತಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀ ರೆಡ್ಡಿ, ಟಾಲಿವುಡ್(ತೆಲುಗು)ನಲ್ಲಿ ಬಹಳ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತದೆ.ಲೈಂಗಿಕ ಕಿರುಕುಳ ಸರ್ವೇ ಸಾಮಾನ್ಯವಾಗಿದೆ ಎಂದು ಆರೋಪಿಸಿ ಅರೆಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದನ್ನು ಖಂಡಿಸಿ ಸ್ಯಾಂಡಲ್‍ವುಡ್(ಕನ್ನಡ) ನಟಿ ಕವಿತಾ, ಅರೆಬೆತ್ತಲೆಯಾದ ವಿಡಿಯೋ ಮಾಡಿದ್ದರು.

ಯಾವುದೇ ಉದ್ಯಮದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಮಾತನಾಡಬೇಕು. ಇಲ್ಲವಾದರೆ ಆಯಾ ಸಿನೆಮಾ ಉದ್ಯಮದ ಲೆಜೆಂಡ್‍ಗಳಿಗೆ ಅವಮಾನಮಾಡಿದಂತಾಗುತ್ತದೆ ಎಂದು ನಟಿ ಕವಿತಾ, ತೆಲುಗು ನಟಿ ಶ್ರೀರೆಡ್ಡಿಗೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ನಟಿ ಕವಿತಾಗೆ ಜೀವ ಬೆದರಿಕೆ ಕರೆಗಳು ಬಂದಿವೆ.

ಇನ್ನೂ 24 ಗಂಟೆಗಳೊಳಗಾಗಿ ನೀನು ಪೋಸ್ಟ್ ಮಾಡಿರುವ ವಿಡಿಯೋ ಆಳಿಸಿ ಹಾಕಿ ಕ್ಷಮೆಯಾಚಿಸಿ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡು ಇಲ್ಲವಾದಲ್ಲಿ ನಿನ್ನ ಕಥೆ ಮುಗಿಸಲಾಗುವುದು ಎಂದು ಅಪರಿಚಿತ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡಿದ್ದಾರೆ. ಈ ಬಗ್ಗೆ ನಟಿ ಕವಿತಾ ಕವಿತಾ ಪೊಲೀಸ್ ಆಯುಕ್ತರ ಕಛೇರಿಯಲ್ಲಿರುವ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ರಾಷ್ಟ್ರ ಅರೆಬೆತ್ತಲೆ sandal wood sri reddy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ