‘ಷಾಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ'21-04-2018

ಮೈಸೂರು: ಬಾದಾಮಿಯಲ್ಲಿ ಸ್ಪರ್ಧೆ ಮಾಡುವಂತೆ ಆ ಭಾಗದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಇಂದು ಬೆಂಗಳೂರಿಗೆ ಹೋಗುತ್ತಿದ್ದೇನೆ, ಹೈಕಮಾಂಡ್ ಜೊತೆ ಚರ್ಚೆ  ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಲ್ಲಿ ಮಾತನಾಡಿದ ಅವರು, ಅಂಬರೀಶ್ಗೆ ಪಕ್ಷದ 'ಬಿ ಫಾರಂ' ಕೊಟ್ಟಿದ್ದೇವೆ ನಿಲ್ಲೋದು ಬಿಡೋದು ಅವರಿಷ್ಟ, ನಾನು ಅಂಬರೀಶ್ ಅವರನ್ನು ಭೇಟಿ ಮಾಡಲು ಹೋಗುವುದಿಲ್ಲ ಎಂದರು ಸಿಎಂ.

ಸಿಎಂ ಸೋಲಿನ ಭೀತಿಯಿಂದ ಎರಡೂಕಡೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡರ ಹೇಳಿಕೆಗೆ, ಹಾಗಾದರೆ ಹೆಚ್.ಡಿ.ಕುಮಾರ ಸ್ವಾಮಿ ಜನ ನಾಯಕರಲ್ವಾ ಅವರೇಕೆ ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರೆ, ಮೊದಲು ಬಿಎಸ್ ವೈ ಶಿಕಾರಿಪುರದಲ್ಲಿ ನಿಂತು ಗೆಲ್ಲಲಿ ಆಮೇಲೆ ನನ್ನ ಬಗ್ಗೆ ಮಾತನಾಡಲಿ ಎಂದು ಇಬ್ಬರಿಗೂ ತಿರುಗೇಟು ನೀಡಿದ್ದಾರೆ.

ಅಮಿತ್ ಷಾಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ, ಮೊದಲು ಅವರ ಮಗನ ಭ್ರಷ್ಟಾಚಾರದ ಬಗ್ಗೆ ಹೇಳಲು ಎಷ್ಟು ದಿನ ಬೇಕು ಅಂತ ಹೇಳಲಿ. ಅವರು ಜೈನ್ ಆಗಿದ್ದು, ನಾನು ಹಿಂದೂ ಅಂತಾರೆ ಎಂದು ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Amit Shah siddaramaiah ಸೋಲಿನ ಭೀತಿ ಮುಖಂಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ