'ಕಾಣದ ಕೈಗಳಿಂದ ಟಿಕೆಟ್ ತಪ್ಪಿದೆ'- ಸುರೇಶ್ ತಳವಾರ

kudachi ticket aspirant congress leader suresh talwar outrage

21-04-2018

ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಕಾಣದ ಕೈಗಳು ನನಗೆ ಟಿಕೆಟ್ ತಪ್ಪಲು ಕಾರಣ ಎಂದು,  ಬಾಗಲಕೋಟೆಯ ಕುಡಚಿ ಮತ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುರೇಶ್ ತಳವಾರ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ನಾನು ತಯಾರಿ ಮಾಡಿಕೊಂಡಿದ್ದೆ, ಈಗ ನನಗೆ ಟಿಕೆಟ್ ನೀಡುವುದು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿಯವರು ನನಗೆ ವಿಶ್ವಾಸ ನೀಡಿದ್ದರು, ಆದರೆ ಕೊನೇ ಕ್ಷಣದಲ್ಲಿ ನನಗೆ ಟಿಕೆಟ್ ನೀಡಿಲ್ಲ, ಹೀಗಾಗಿ ತಾನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಅದೇ ಕಾರಣಕ್ಕೆ ಇಂದು ಕಾರ್ಯಕರ್ತರ ಸಭೆ ಕರೆದಿದ್ದು, 23ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vidhana sabha election ಕಾರ್ಯಕರ್ತ ಅಭ್ಯರ್ಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ