‘ಯಾವ ರಾಜಕೀಯ ಪಕ್ಷದ ಮೇಲೂ ನಂಬಿಕೆ ಇಲ್ಲ’21-04-2018

ಮಂಡ್ಯ: ಕಲಾವಿದನಾಗಿ ನನಗೆ ಸಮಾಜದ ಮೇಲೆ ಜವಾಬ್ದಾರಿ ಇದೆ, ಅಷ್ಟೇ ಜವಾಬ್ದಾರಿ ಪತ್ರಕರ್ತರ ಮೇಲೂ ಇದೆ, ಅದಕ್ಕಾಗಿ ನಾನು ಪತ್ರಕರ್ತರ ಜೊತೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದೇನೆ ಎಂದು ಮಂಡ್ಯದ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗಿನ  ಸಂವಾದದಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ.

ಯಾವ ರಾಜಕೀಯ ಪಕ್ಷದ ಮೇಲೂ ನನಗೆ ನಂಬಿಕೆ ಇಲ್ಲ, ಎಲ್ಲಾ ಪಕ್ಷಗಳು ನಂಬಿಕೆ ಕಳೆದುಕೊಂಡಿವೆ, ದೊಡ್ಡ ಕಳ್ಳರು, ಸಣ್ಣ ಕಳ್ಳರು ಇದ್ದಾರೆ ಅಷ್ಟೆ. ನಾನು ಏನೇ ಮಾತಾಡಿದರೂ ವಿವಾದವಾಗುತ್ತಿದೆ, ನಾನು ನಿಷ್ಠೂರವಾಗಿ ಹೆದರಿಕೆ ಇಲ್ಲದೆ ಮಾತನಾಡುತ್ತೇನೆ ಹಾಗಾಗಿ ವಿವಾದವಾಗುತ್ತಿದೆ.

ಗೌರಿಲಂಕೇಶ್ ಅವರ ಹತ್ಯೆಯ ನಂತರ ನಾನು ಅಲರ್ಟ್ ಆದೆ, ಕೋಮುವಾದ ಈ ದೇಶಕ್ಕೆ ದೊಡ್ಡ ರೋಗ ಇಲ್ಲಿ ಎಲ್ಲರೂ ಬದುಕಬೇಕು, ನಾನು ಬಿಜೆಪಿ ವಿರುದ್ಧವಾಗಿದ್ದೇನೆ, ನಾವು ಹೀಗೆ ಇರಬೇಕು ಅನ್ನೋದನ್ನ ಬಲವಂತವಾಗಿ ಸಿದ್ಧಾಂತಗಳನ್ನು ಹೇರುತ್ತಿದೆ, ಹೀಗಾಗಿ ಬಿಜೆಪಿ ವಿರುದ್ಧವಾಗಿದ್ದೇನೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಟ್ವೀಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೈ, ಒಂದು ವಿಡಿಯೊ ಹಾಕಿ ಜೀಹಾದಿಗಳು ಹೀಗೆ ಮಾಡುತ್ತಿದ್ದಾರೆ, ಬಾಕಿದು ನಿಮಗೆ ಬಿಟ್ಟಿದ್ದು ಎಂದರೆ ಏನ್ ಅರ್ಥ ಎಂದು ಪ್ರಶ್ನೆ ಮಾಡಿದ್ದಾರೆ.

ಈ‌ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಬೇಕು, ಹೀಗಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಮೊದಲು ನಮ್ಮನ್ನ ಕೊಲ್ಲುವ ರಾಕ್ಷಸನಿಂದ ನಮ್ಮನ್ನ ರಕ್ಷಿಸಿಕೊಳ್ಳಬೇಕು ಉಳಿದ ರಾಕ್ಷರಸ ಬಗೆಗೆ ಆ ಮೇಲೆ ನೋಡಿಕೊಳ್ಳೊಣ ಎಂದು ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

prakash rai press ಕೋಮುವಾದ ರಾಕ್ಷಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ